ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿ 79ನೇಯ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೆಫ್ಟಿನೆಂಟ್ ಕರ್ನಲ್ ಎಸ್. ಟಿ. ರಮಾಕಾಂತನ್ ಅವರು ಧ್ವಜಾರೋಹಣಗೈದರು.

ಶಾಲಾ ಸಂಚಾಲಕರಾದ ಎಂ . ಪಿ. ಉಮೆಶ್ ಹಾಗೂ ಶಾಲಾ ಪ್ರಾಂಶುಪಾಲರಾದ ಟಿ. ಎಮ್ .ದೇಚಮ್ಮ ಅವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ತಂಡವು ಧ್ವಜಾರೋಹಣ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಶಾಲಾ ವಿದ್ಯಾರ್ಥಿಗಳು ಧ್ವಜಗೀತೆಯನ್ನು ಹಾಡಿದರು.















ನಂತರ ನಡೆದ ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿನಿ ರಾಹಿ ಅಡ್ಕಾರ್ ವಿದ್ಯಾರ್ಥಿಗಳ ಪರವಾಗಿ ಸ್ವಾತಂತ್ರ್ಯ ಭಾರತದ ವಿವಿಧತೆಯಲ್ಲಿ ಏಕತೆಯ ಪ್ರಾಮುಖ್ಯತೆ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸಮೂಹಗಾನದಲ್ಲಿ ಭಾರತದ ವೈಭವದ ಬಗೆಗಿನ ದೇಶಭಕ್ತಿಗೀತೆಯನ್ನು ಹಾಡಿದರು.

ದೇಶ ಸೇವೆಗಾಗಿ ಸೈನ್ಯ ಸೇರುವ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡುತ್ತಾ ಮಾತನಾಡಿದ ಮುಖ್ಯ ಅತಿಥಿ ಎಸ್ ಟಿ ರಮಾಕಾಂತನ್ ಅವರು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಬೆಳವಣಿಗೆಯ ಅಗತ್ಯ ಹಾಗೂ ಪೋಷಕರ ಮತ್ತು ಗುರುಗಳ ನಿರ್ದೇಶನಕ್ಕೆ ಕಿವಿಗೊಡುವುದು ಹಾಗೂ ಜೀವನದಲ್ಲಿ ಶಿಸ್ತಿನ ಪಾತ್ರದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.
ವಿದ್ಯಾರ್ಥಿಗಳು ಮನೋರಂಜಿತ ಮತ್ತು ವರ್ಣಮಯ ಸಮೂಹ ನೃತ್ಯವನ್ನು ಪ್ರದರ್ಶಿಸಿದರು.
ಶಾಲಾ ವಿದ್ಯಾರ್ಥಿ ಮಾ. ವಿಶ್ರುತ್ ಪಿ.ಸಿ. ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀಯಾ ವಂದನಾರ್ಪಣೆ ಗೈದರು. ಶಾಲಾ ವಿದ್ಯಾರ್ಥಿಗಳಾದ ಕು. ಇಂಚರಾ ಪಾರೆ ಹಾಗೂ ಬೆಟ್ಸಾ ಮೇರಿ ಮ್ಯಾಥ್ಯೂ ಕಾರ್ಯಕ್ರಮವನ್ನು ನಿರೂಪಿಸಿದರು.










