ಅಜ್ಜಾವರ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ : ವಿವಿಧ ಕಾಮಗಾರಿ ಉದ್ಘಾಟನೆ

0

ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ 79ನೆಯ ಸ್ವಾತಂತ್ರೋತ್ಸವ ಮತ್ತುವಿವಿಧ ಕಾಮಗಾರಿಗಳ ಉದ್ಘಾಟನೆ, ಸ್ಮಾರ್ಟ್ ಟಿವಿ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು.

ಧ್ವಜಾರೋಹಣ ವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕ ನೆರವೇರಿಸಿದರು.


ಅತಿಥಿಗಳಾಗಿ ಡಾ. ಅವಿನಾಶ್ ಅಜ್ಜಾವರ, ಅಬ್ದುಲ್ ರಹಿಮಾನ್ ಸಂಕೇಶ್, ಬಾಲಕೃಷ್ಣ ಮಾಸ್ತರ್ ಅಜ್ಜಾವರ ,ಯಶೋಧರ ಮಾಸ್ತರ್ ನಾರಾಲು ,ಜಗದೀಶ್ ಮಂಡೆಕೋಲು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಶೌಕತ್ ಅಲಿ, ಚನಿಯ ಕಲ್ತಡ್ಕ, ಗುರುರಾಜ್ ಅಜ್ಜಾವರ, ಮಧುರಾ ಮಂಡೆಕೋಲು, ಶಶ್ಮಿ ಭಟ್ ಅಜ್ಜಾವರ, ಸುಜಾತ ಕರ್ಲಪ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲಾ ಅಜ್ಜಾವರ, ಸದಸ್ಯರಾದ ರಾಹುಲ್ ಅಡ್ಪಂಗಾಯ ಭಾಗವಹಿಸಿದ್ದರು.

ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಮೆತ್ತಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಉಮಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ರೇವತಿ ವಂದನಾರ್ಪಣೆ ಮಾಡಿದರು. ಅಕ್ಷರದಾಸೋಹ ಮುಖ್ಯ ಅಡುಗೆಯವರಾಗಿದ್ದು ನಿವೃತ್ತಿ ಹೊಂದಿದ ಧರ್ಮಾವತಿಯವರನ್ನು ಮತ್ತು ನಿವೃತ್ತ ಶಿಕ್ಷಕರುಗಳಾದ ಬಾಲಕೃಷ್ಣ ಮಾಸ್ತರ್,ಯಶೋಧರ ಮಾಸ್ತರ್ ಮತ್ತು ಪದ್ಮನಾಭ ಮಾಸ್ತರುಗಳನ್ನು ಸನ್ಮಾನಿಸಲಾಯಿತು.

ಪ್ರೌಢಶಾಲೆಯ 2001-02 ಶೈಕ್ಷಣಿಕ ವರ್ಷದ 10ನೆಯ ತರಗತಿ ವಿದ್ಯಾರ್ಥಿಗಳು ತಮ್ಮ ಅಗಲಿದ ಸಹಪಾಠಿಗಳಾದ ಶುಭಾಶಿನಿ, ಸೀತಾರಾಮ,ಮತ್ತು ಶ್ರೀಲತಾ ರವರ ಸ್ಮರಣಾರ್ಥ ಎರಡು ಸ್ಮಾರ್ಟ್ ಟಿವಿ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು.