ಬಳ್ಪ ಗ್ರಾಮದ ಶಿವರಾಮ ಗೌಡ ಎಣ್ಣೆಮಜಲು ಅವರ ವೈಕುಂಠ ಸಮಾರಂಭ ಆ.18 ರಂದು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಸಂತೃಪ್ತಿ ಸಭಾಭವನದಲ್ಲಿ ನಡೆಯಿತು.
















ಗೋಪಾಲ ಎಣ್ಣೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಪಠೇಲ್ ಪುಟ್ಟಣ್ಣ ಗೌಡ ದೀಪ ಬೆಳಗಿಸಿದರು. ಹೈಕೋರ್ಟ್ ವಕೀಲರಾದ ಧರ್ಮಪಾಲ ಎಣ್ಣೆಮಜಲು ಮೃತರ ಬಗ್ಗೆ ನುಡಿನಮನ ಸಲ್ಲಿಸಿದ ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮನೆಯವರು, ಅಳಿಯಂದಿರು, ಕುಟುಂಬಸ್ಥರು ಮತ್ತು ಬಂಧುಗಳು ಉಪಸ್ಥಿತರಿದ್ದರು










