ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಐವರ್ನಾಡು ವತಿಯಿಂದ 39 ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ಆ.27 ರಂದು ಬೆಳಿಗ್ಗೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿದೆ.
6 ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು ಎಲ್.ಕೆ.ಜಿ., ಯು.ಕೆ.ಜಿ ,ಅಂಗನವಾಡಿ ಮಕ್ಕಳಿಗೆ ಗಣಪತಿಯ ಚಿತ್ರಕ್ಕೆ ಬಣ್ಣ ತುಂಬುವುದು.ಕಲಾಕೃತಿಯನ್ನು ನೀಡಲಾಗುವುದು.
ಉಳಿದ ವಿಭಾಗಗಳಿಗೆ ವಿಷಯ ಗಣಪತಿಯ ಚಿತ್ರ ಬಿಡಿಸುವುದು.
ವಿಭಾಗ 2 (1ನೇ ಮತ್ತು 2 ನೇ ತರಗತಿ)ವಿಭಾಗ 3 (3 ನೇ ಮತ್ತು 4 ನೇ)ವಿಭಾಗ 4( 5ನೇ ಮತ್ತು 6,7ನೇ)ವಿಭಾಗ 5 (8ನೇ,9 , 10 ನೇ )
ವಿ.ಸೂ : ಸ್ಪರ್ಧಾಳುಗಳು ಬೆಳಿಗ್ಗೆ ಗಂಟೆ 10.30 ಕ್ಕೆ ಸರಿಯಾಗಿ ಹಾಜರಿರಬೇಕು.ಚಿತ್ರಕ್ಕೆ ಬಣ್ಣ ಹಚ್ಚುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು,ಚಿತ್ರ ಬಿಡಿಸಲು 1.30 ಗಂಟೆ ಸಮಯಾವಕಾಶ ನೀಡಲಾಗುವುದು.
ಚಿತ್ರ ಬಿಡಿಸುವ ಹಾಳೆ ನೀಡಲಾಗುವುದು.
ವಿಭಾಗ















ವಿಭಾಗ -1 ಕ್ಕೆ ಚಿತ್ರಕ್ಕೆ ಬಣ್ಣ ತುಂಬುವ ಕಲಾಕೃತಿಯನ್ನು ನೀಡಲಾಗುವುದು.
ಪ್ರತೀ ವಿಭಾಗದಲ್ಲೂ ವಿಜೇತರಿಗೆ ಪ್ರಥಮ,ದ್ವಿತೀಯ,ತೃತೀಯ ಫಲಕ ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ : ಪ್ರಸನ್ನ ಐವರ್ನಾಡು – 9449331609, ಪ್ರವೀಣ ಎಣ್ಣೆಕಳ – 7022898102



