ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಸಂಭ್ರಮದ ಆಟಿ ಉತ್ಸವ ಆ. 20ರಂದು ನಡೆಯಿತು.















ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಆಟಿ ಉತ್ಸವದಲ್ಲಿ ತೊಡಗಿಸಿ ಕೊಂಡಿದ್ದರು. ವಿದ್ಯಾರ್ಥಿಗಳಿಗೆ ಸೊಬಾನೆ, ಜಾನಪದ ನೃತ್ಯ ಮತ್ತು ಸಾಂಪ್ರದಾಯಿಕ ಎ.ಜೆ ಪಾಕಶಾಲಾ ಹಾಗೂ ಪೊಟ್ ಪೇಂಟಿಂಗ್, ಅಲಂಕಾರಿಕ ಹ್ಯಾಂಗಿಂಗ್,ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ದೀಪ ಬೆಳಗಿಸಿ ತುಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ತೀರ್ಪುಗಾರರಾಗಿ ಭವನಿಶಂಕರ ಅಡ್ತಲೆ, ಪುಷ್ಪವತಿ ಬಾಲಾಡಿ, ಸ್ಮಿತಾ ಅಮೃತ್ ರಾಜ್, ಪೂಜಾ ಸಂತೋಷ್, ರುಕ್ಮಿಣಿ ಬಂಗಾರಕೋಡಿ, ಅಭಿ ಕುಲಾಲ್, ಲಕ್ಷ್ಮಿ ಲಾವಣ್ಯ, ಹರ್ಷಿತ ರಂಜಿತ್ ಆಗಮಿಸಿದ್ದರು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಮತ್ತು ಟ್ರಸ್ಟಿ ಜ್ಯೋತಿ ಆರ್ ಪ್ರಸಾದ್ ಕಾಲೇಜಿನ ಸಿಇಓ ಡಾ. ಉಜ್ವಲ್ ಯುಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಹಾಗೂ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.










