ಆ. 27, 28, 29: ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ಗಣೇಶೋತ್ಸವ

0

ಹಳೆಗೇಟು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ಆ. 27 ರಿಂದ ಆ 28 ರವರೆಗೆ 42 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು
ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಅನ್ನದಾನ, ಕಾರ್ಯಕ್ರಮ ದೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಗಿವುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಆ.27 ರಂದು ಪೂರ್ವಾಹ್ನ ಗಂಟೆ 7-00ಕ್ಕೆ ಸ್ಥಳಶುದ್ಧಿ, ಗಣಪತಿ ಹೋಮ ಬೆಳಿಗ್ಗೆ ಗಂಟೆ 8-00ಕ್ಕೆ ಪ್ರತಿಷ್ಟಾಪನೆ,
ಮಧ್ಯಾಹ್ನ ಗಂಟೆ 1-00ಕ್ಕೆ ಮಹಾ ಪೂಜೆ,
ಸಂಜೆ ಗಂಟೆ 6-00ಕ್ಕೆ ಶಾಂತಿನಗರ ದೀಪಾಂಜಲಿ ಮಹಿಳಾ ಭಜನ ಮಂಡಲ
ಇವರಿಂದ ಭಜನಾ ಕಾರ್ಯಕ್ರಮ ರಾತ್ರಿ ಗಂಟೆ 7-00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಂಜೆ ಗಂಟೆ 7-15ಕ್ಕೆ ಪ್ಯೂಶನ್ ಡಾನ್ಸ್ ತಂಡದ ಚಿಣ್ಣರಿಂದ ವಸಂತ ಕಾಯರ್ತೋಡಿ ಇವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.


ಹಾಗೂ ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರುಗು ನಡೆಯಲಿದ್ದು, ಮಹಾಪೂಜೆ ರಾತ್ರಿ ಗಂಟೆ 9-30ಕ್ಕೆ ನಡೆಯಲಿದೆ.

ಆ 28 ರಂದು ಪೂರ್ವಾಹ್ನ ಗಂಟೆ 8-00ಕ್ಕೆ : ಪೂಜೆ
ಅಪರಾಹ್ನ ಗಂಟೆ 1-00ಕ್ಕೆ
ಸಂಜೆ ಗಂಟೆ 6-00ರಿಂದ
ಗಜಾನನ ಭಜನಾ ಸಂಘ ಜಯನಗರ ವತಿಯಿಂದ
ಭಜನಾ ಕಾರ್ಯಕ್ರಮ
ರಾತ್ರಿ ಗಂಟೆ 7-00ಕ್ಕೆ : ಮಿಲೇನಿಯಂ ಆರ್ಕೆಸ್ಟ್ರಾ ತಲಚೇರಿ, ಕೇರಳ-ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ
ಭಕ್ತಿ ಹಾಗೂ ಚಿತ್ರಗೀತೆಗಳ ಸಂಗಮ ನಡೆದು ರಾತ್ರಿ ಗಂಟೆ 10-00ಕ್ಕೆ ಮಹಾಪೂಜೆ ನಡೆಯಲಿದೆ.

ಆ 29.ವೈಭವದ ಶೋಭಾಯಾತ್ರೆ

ಆ 29 ರಂದು ಸಂಜೆ 5 ಗಂಟೆಗೆ ವೈಭವದ ಶೋಭಾಯಾತ್ರೆಯು, ಹಳೆಗೇಟು, ಶ್ರೀರಾಂಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್, ವಾಪಸ್ಸು ಮಿಲಿಟ್ರಿ ಗ್ರೌಂಡ್ ನಂತರ ಬ್ರಹ್ಮರಗಯದ ಬಳಿ ಜಲಸ್ಥಂಭನಗೊಳ್ಳಲಿದೆ.