ಡಾ. ಪ್ರಭಾಕರ ಶಿಶಿಲರು ಮಹಾ ಭಾರತವನ್ನು ಆಧಾರಿಸಿ ರಚಿಸಿದ ಪುಂಸ್ತ್ರೀ ಕಾದಂಬರಿ ತಮಿಳಿನಲ್ಲಿ ಪ್ರಕಟಣೆಗೊಂಡು ಬಿಡುಗಡೆಯಾಗಿದೆ.















ಚೆನ್ನೈಯ ಯಾವರಂ ಪಬ್ಲಿಷರ್ಸ್ ಹೊರ ತಂದಿರುವ ಪುಂಸ್ತ್ರೀಯನ್ನು ಕೊಯಂಬತ್ತೂರಿನ ಪ್ರೊ| ವಿಮಲಾ ನಟರಾಜನ್ ತಮಿಳಿಗೆ ಅನುವಾದಿಸಿರುತ್ತಾರೆ.
ಪುಂಸ್ತ್ರೀ ಈಗಾಗಲೇ ಸಂಸ್ಕೃತ, ತೆಲುಗು, ಮಲೆಯಾಳಂ, ಇಂಗ್ಲೀಷ್ ಮತ್ತು ಅರೆಭಾಷೆಗೆ ಅನುವಾದಗೊಂಡಿದೆ.
ಕನ್ನಡದಲ್ಲಿ ಏಳು ಮುದ್ರಣಗಳನ್ನು ಕಂಡಿರುವ ಈ ಕೃತಿಯ ೬೦೦೦ ಪ್ರತಿಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ.










