ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ಆ. 27 ರಿಂದ 31 ರ ತನಕ ನಡೆಯಲಿರುವ 57ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆಯಲಿರುವ ವಿವಿಧ ಆಟೋಟ ಸ್ಪರ್ಧೆಗಳಿಗೆ
ಆ. 24 ರಂದು ಚಾಲನೆ ನೀಡಲಾಯಿತು.

ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಪಿ.ಕೆ ಉಮೇಶ್ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.















ವೇದಿಕೆಯಲ್ಲಿ ದೇವತಾರಾಧನಾ ಸಮಿತಿಯ ಅಧ್ಯಕ್ಷ ದಿನೇಶ್ ಕುಮಾರ್ ಕೆ ಸಿ, ಪ್ರಧಾನ ಕಾರ್ಯದರ್ಶಿ ಭರತ್ ಪಿ.ಯು, ಕೋಶಾಧಿಕಾರಿ ಬೆಳ್ಯಪ್ಪ ಗೌಡ ಬೀರಮಂಗಲ, ಶಿವರಾಮ ಕೇರ್ಪಳ, ಕಾರ್ಯದರ್ಶಿ ಮಮತಾ ಕೈಲಾಸ್ ಶೆಣೈ,
ಮಾಜಿ ಅಧ್ಯಕ್ಷ ಸೋಮನಾಥ ಪೂಜಾರಿ,ಪದಾಧಿಕಾರಿಗಳಾದ ಮಾಧವ ಗೌಡ, ಕಿಶೋರಿ ಶೆಟ್, ಸುಧಾಕರ ಕೇರ್ಪಳ, ಜನಾರ್ಧನದೋಳ,ಗೋಪಾಲಕೃಷ್ಣ ಕೆ. ಎಸ್, ವಿಶ್ವನಾಥ ಕುಂಚಡ್ಕ, ಕಿರಣ್ ಕುರುಂಜಿ, ಮಹೇಶ್ ರೈ ಮೇನಾಲ, ಪ್ರಕಾಶ್, ಜಗದೀಶ್, ನಾರಾಯಣ, ಜಗದೀಶ್ ಕೆ ಉಪಸ್ಥಿತರಿದ್ದರು. ಸಂಚಾಲಕ ದಾಮೋದರ ಮಂಚಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.










