ಸಂಪಾಜೆ ಗ್ರಾಮದ ದೊಡ್ಡಡ್ಕ ಶ್ರೀ ಕೊರಗಜ್ಜ ದೈವಸ್ಥಾನದ ಬಳಿ ಇರುವ ತನ್ನ ಮಾಲಕತ್ವದ ಸ್ವಾಮಿ ಕೊರಗಜ್ಜ ಕ್ಯಾಂಟೀನ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು 23.3.2024 ರಂದು ಚಂದ್ರಶೇಖರ ಎಂಬವರ ಮೇಲೆ ಪೋಲೀಸರು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.















ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32,34 ರಂತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸುಳ್ಯ ಪೊಲೀಸರು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರು ಪ್ರಕರಣವನ್ನು ಸಾಬೀತು ಪಡಿಸಲು ಅಭಿಯೋಜನೆಯು ವಿಫಲಗೊಂಡಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ದೋಷಮುಕ್ತಗೊಳಿಸಿ 20/08/2025 ರಂದು ತೀರ್ಪು ನೀಡಿರುತ್ತಾರೆ . ಆರೋಪಿಯ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ರಾಜೇಶ್ ಬಿ.ಜಿ. ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ. ವಾದಿಸಿದ್ದರು.










