














ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆ
ಆ. 24ರಂದು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಕಾರ್ಯಾಲಯದಲ್ಲಿ ಸಮಿತಿಯ ಅಧ್ಯಕ್ಷ ಕ್ಯಾ. ಸುದಾನಂದ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಉಸ್ತುವಾರಿಗಳಾಗಿ ಯಾದವ ಸಭಾ ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಕೇನಾಜೆ ಹಾಗೂ ಯಾದವ ಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಭಾಗವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂತೋಷ ಬಾಯಂಬಾಡಿ ಮಂಡಿಸಿದರು. ಕೋಶಾಧಿಕಾರಿ ಮನ್ವಿತ್ ಯಾದವ್ ಲೆಕ್ಕಪತ್ರ ಮಂಡಿಸಿದರು. ಬೆಳ್ಳಾರೆ ಯಾದವ ಸಭಾ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬಾಳಿಲ ಉಪಸ್ಥಿತರಿದ್ದರು. ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆಯ ಅಧ್ಯಕ್ಷ ಸುದಾನಂದ ಮಣಿಯಾಣಿ ಸಮುದಾಯದ ಬಂಧುಗಳಿಗೆ ಪ್ರಾದೇಶಿಕ ಸಮಿತಿ ನಡೆಸುವ ಸಮುದಾಯಪರ ಕೆಲಸಗಳನ್ನು ವಿವರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮುದಾಯಪರ ಕಾರ್ಯಾಗಳಲ್ಲಿ ತೊಡಗಿಸಿಕೊಳ್ಳಲು ಸದಸ್ಯರಿಗೆ ಕರೆನೀಡಿದರು. ಚಂದ್ರಹಾಸ ಮಣಿಯಾಣಿ ಪಡ್ಪು ತಾಲೂಕಿನಲ್ಲಿ ಸಮುದಾಯಭವನ ಆಗಬೇಕೆಂದು ಮನವಿ ಮಾಡಿದರು. ತಾಲೂಕು ಉಸ್ತುವಾರಿಗಳು ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು
ಶ್ರೀಮತಿ ಮೋನಿಷಾ ಬೀಡು ಪ್ರಾರ್ಥಿಸಿದರು. ನಿಶ್ಮಿತಾ ಬೀಡು ಸ್ವಾಗತಿಸಿದರು. ಕಾರ್ಯಕ್ರಮನಿರೂಪಣೆ ಯನ್ನು ಚಂದ್ರಹಾಸ ಮಣಿಯಾಣಿ ಪಡ್ಪು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಭಾಗವಹಿದರು.










