ಹಳೆಗೇಟು : ಸಾಂಸ್ಕೃತಿಕ ಸಂಘ (ರಿ.) ಗಣೇಶೋತ್ಸವ ಪ್ರಯುಕ್ತ ಮೂರ್ತಿ ಪ್ರತಿಷ್ಠೆ

0

ಇಂದು ಸಂಜೆ 3 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಇದರ ವತಿಯಿಂದ 42 ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಆ 27 ರಂದು ಬೆಳಿಗ್ಗೆ ಮೂರ್ತಿ ಪ್ರತಿಷ್ಠೆ ನಡೆಯಿತು.
ಪುರೋಹಿತ ನಟರಾಜ್ ಶರ್ಮ ರವರು ಪೂಜಾ ಕಾರ್ಯಕ್ರಮ ವನ್ನು ನಡೆಸಿದರು.

ಮೂರು ದಿನಗಳ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ಸಂಜೆ ನಡೆಯಲಿದೆ.

ಬೆಳಿಗ್ಗೆ 7 ಗಂಟೆಗೆ ಸ್ಥಳ ಶುದ್ಧಿ ಬಳಿಕ ಗಣಪತಿ ಹೋಮ ನಡೆಯಿತು. ಬೆಳಿಗ್ಗೆ 8ಗಂಟೆಗೆ ಶ್ರೀ ಗಣಪತಿಯ ವಿಗ್ರಹ ಪ್ರತಿಷ್ಠಾಪನೆ ಗೊಂಡಿತು.

ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಉಪಾಧ್ಯಕ್ಷ ಗಣೇಶ್ ಕೊಯಿಂಗೋಡಿ,ಪ್ರಧಾನ ಕಾರ್ಯದರ್ಶಿ ಶ್ರೀಜೇಶ್ ,ಖಜಾಂಜಿ ಚಿತ್ತ ರಂಜನ್, ಸಹ ಕಾರ್ಯದರ್ಶಿ ಧನಂಜಯ ಪಂಡಿತ್,
ಕಾರ್ಯಕ್ರಮದ ಸಂಚಾಲಕರುಗಳಾದ ಜ್ಞಾನೇಶ್ವರ ಶೇಟ್,ಶ್ರೀನಿವಾಸ ರಾವ್, ಎಂ. ದಿವಾಕರ ತಿನ್ಸನ್‌ (ಸೇರ್ಕಜೆ) ರಾಕೇಶ್ ಕುಂಟಿಕಾನ, ರಾಮಕೃಷ್ಣ ಆಲಂಕಯ್ಯ,ಗೌತಂ ಭಟ್, ಶಿವನಾಥ ರಾವ್, ಸಚಿನ್ ರಾವ್ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳಾದ ಕಿಶನ್‌ಕುಮಾರ್, ಯತಿನ್ ರಾವ್, ವಿಜಯಕುಮಾರ್ ಎ.ಕಮಲಾಕ್ಷ ಆಚಾರ್ಯ, ಗೌತಮ್ ಸೇರ್ಕಜೆ, ನವೀನ್ ರಾವ್, ಬಿ.ವಿ.ರಾಧಾಕೃಷ್ಣ ರಾವ್,ದಿನೇಶ್ ಬೆಟ್ಟಂಪಾಡಿ, ಜನಾರ್ಧನ ಬೆಟ್ಟಂಪಾಡಿ, ಭುವನೇಂದ್ರ ಶೇಟ್, ಶಿವಕುಮಾರ್ ಬೆಟ್ಟಂಪಾಡಿ,ಗಣೇಶ್ ಬೆಟ್ಟಂಪಾಡಿ,ಸುನಿಲ್ ಮಾಣಿಬೆಟ್ಟು,ಶಶಿಧರ ಕಜೆ, ವಸಂತ ಬೆಟ್ಟಂಪಾಡಿ ಹಾಗೂ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಮಧ್ಯಾಹ್ನ 1ಗಂಟೆಗೆ ಮಹಾಪೂಜೆ ಬಳಿಕ ಸಂಜೆ 6 ಗಂಟೆಗೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7-00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭ ಕಾರ್ಯಕ್ರಮಗಳು ನಡೆಯಲಿದೆ.
ಸಂಜೆ ಗಂಟೆ 7-15ಕ್ಕೆ: ಪ್ಯೂಷನ್ ಡಾನ್ಸ್ ತಂಡದ ಚಿನ್ನರಿಂದ ವಸಂತ್ ಕಾಯರ್ತೋಡಿ ಇವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರಗು ನಡೆಯಲಿದೆ.