ಸುಬ್ರಹ್ಮಣ್ಯದಲ್ಲಿ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

16 ಲಕ್ಷ ವೆಚ್ಚದ, 11ಕೆ.ಜಿ 600 ಗ್ರಾಂ ತೂಕದ ರಜತ ಪ್ರಭಾವಳಿ ಸಮರ್ಪಣೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.27 ರಿಂದ ಸೆ‌.2 ರ ವರಗೆ ನಡೆಯಲಿದ್ದು ಇಂದು ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ ನಡೆಯಿತು ‌ ಬಳಿಕ ಶ್ರೀ ಮಹಾಗಣಪತಿಗೆ 16 ಲಕ್ಷ ವೆಚ್ಚದ 11ಕೆ.ಜಿ 600 ಗ್ರಾಂ ತೂಕದ
ರಜತ ಪ್ರಭಾವಳಿ ಸಮರ್ಪಣೆ ನಡೆಯಿತು .


ಆ ಬಳಿಕ108 ತೆಂಗಿನ ಕಾಯಿ ಗಣಪತಿ ಹವನ, ಸ್ಪರ್ಧೆಗಳು ನಡೆಯಿತು.

ಸಂಜೆ 5 ರಿಂದ-ಭಜನೆ, ಬಳಿಕ ವಿದುಷಿ ಕು. ಮೇಧಾ ವಿದ್ಯಾಭೂಷಣ ಬೆಂಗಳೂರು


ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ನಡೆದು ರಾತ್ರಿ ಗಾನನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯದ ಕಲಾವಿದರಿಂದ ನೃತ್ಯ ಸಂಗಮ ಹಾಗೂ ನೃತ್ಯ ರೂಪಕ – ಶ್ರೀನಿವಾಸ ಕಲ್ಯಾಣ ನಡೆಯಲಿದೆ.

ಬಳಿಕ ಗೀತ ನೃತ್ಯಾಲಯ ಧರ್ಮಸ್ಥಳ ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಚೈತ್ರಾ ಭಟ್ ಮತ್ತು ತಂಡದವರಿಂದ ಸಮೂಹ ನೃತ್ಯ‌ ನಡೆಯಲಿದೆ.