ಕರಾಟೆ ಸ್ಪರ್ಧೆಯಲ್ಲಿ ಯುಗನ್ ಜೇನುಕೋಡಿ ರಾಜ್ಯಮಟ್ಟಕ್ಕೆ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಪಿ.ಎಮ್.ಶ್ರೀ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯುಗನ್ ಜೇನುಕೋಡಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿಯಾಗಿರುವ ಇವರಿಗೆ ಕರಾಟೆ ಶಿಕ್ಷಕ ದಿನೇಶ್ ಮುರುಳ್ಯ ತರಬೇತಿ ನೀಡಿರುತ್ತಾರೆ. ಇವರು ಮೋಹಿತ್ ಜೇನುಕೋಡಿ ಮತ್ತು ಭವ್ಯಾಮೋಹಿತ್ ಜೇನುಕೋಡಿ ಏನೇಕಲ್ ಇವರ ಪುತ್ರ.