ಜನಾರ್ದನ ಹೊಸಗದ್ದೆ ನಿಧನ

0

ಸುಳ್ಯ ಕಸಬಾ ಗ್ರಾಮದ ಹೊಸಗದ್ದೆ ನಿವಾಸಿ, ಅಟೋಚಾಲಕ ಜನಾರ್ದನರವರು ಇಂದು ಮುಂಜಾನೆ ಹೃದಯಾಘಾತದಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೫೨ ವರ್ಷ ವಯಸ್ಸಾಗಿತ್ತು.

ನಿನ್ನೆ ರಾತ್ರಿ ಮನೆಯಲ್ಲಿದ್ದ ಸಂದರ್ಭ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯವರು ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.


ಮೃತರು ತಾಯಿ ಸುಂದರಿ, ಪತ್ನಿ ಶಾರದಾ, ಪುತ್ರಿಯರಾದ ಕೃತಿಕಾ, ಚರಿತಾ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.