ಮಳೆಯ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಇಕ್ಕೆಲಗಳಲ್ಲಿ ಮಾದರಿ ನಡೆ
ಅರಂತೋಡು ಗ್ರಾಮ ಪಂಚಾಯತ್ ರಾಷ್ಟ್ರೀಯ ಸೇವಾ ಯೋಜನೆ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಸುಳ್ಯ ಸುದ್ದಿ ಹಬ್ಬ ಅರಂತೋಡು ಗ್ರಾಮ ಸಮಿತಿ ಇವುಗಳ ಸಹಯೋಗದಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ಮತ್ತು ಸ್ವಚ್ಛತಾ ಕಾರ್ಯಕ್ರಮಕ್ಕೆ ಆ.30 ರಂದು ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ , ಸುದ್ದಿ ಕಚೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಬಳಿಕ
ಎನ್.ಎಸ್.ಎಸ್ ಶಿಬಿರ ಘಟಕ ಅಧಿಕಾರಿ ಲಿಂಗಪ್ಪ ಮಾಸ್ತರ್ ತೆಂಗಿನ ಕಾಯಿ ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
















ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಗ್ರಾ .ಪಂ ಉಪಾಧ್ಯಕ್ಷರು ,
ಭವಾನಿ ಸಿ. ಎ, ಸುಳ್ಯ ಸುದ್ದಿ ಕಚೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ , ಗ್ರಾಮ.ಪಂ ಸದಸ್ಯರಾದ
ಶಿವಾನಂದ ಕುಕ್ಕುಂಬಳ, ವೆಂಕಟ್ರಮಣ ಪೆತ್ತಾಜೆ, ಹರಿಣಿ ದೇರಾಜೆ, ಮಾಲಿನಿ ಉಳುವಾರು, ಪುಷ್ಪಾಧರ ಕೊಡಂಕೇರಿ, ಸುಜಯ್ ಮೇಲಡ್ತಲೆ, ರವೀಂದ್ರ ಪಂಜಿ ಕೋಡಿ, ದಯಾನಂದ ಕುರುಂಜಿ, ರಂಜಿತ್ ಆಡ್ತಲೆ, ಕಿಶೋರ್ ಕಿರ್ಲಾಯ, ಕಿಶೋರ್ ಕುಮಾರ್ ಉಳುವಾರು, ಭಾರತಿ ಪುರುಷೋತ್ತಮ, ಪುಷ್ಪಾ ಮೇದಪ್ಪ , ಉಪನ್ಯಾಸಕರು ಮೋಹನ್ ಚಂದ್ರ , ಸುದ್ದಿ ಪತ್ರಿಕೆಯ ವರದಿಗಾರ ಕೃಷ್ಣ ಬೆಟ್ಟ , ಶ್ರೀಜಿತ್ ಸಂಪಾಜೆ, ಸುದ್ದಿ ಚಾನೆಲ್ ನ ನಿರೂಪಕಿ ಪೂಜಾಶ್ರೀ ವಿತೇಶ್ ಕೋಡಿ , ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಘಟಕದ ಸಿಬ್ಬಂದಿಗಳು , ವಿವಿಧ ಸಂಘಗಳ ಪದಾಧಿಕಾರಿಗಳು, ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳು , ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ , ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಹಾಗೂ ಸ್ವಚ್ಛತಾ ವಾಹನಗಳ ನಾಲ್ಕು ತಂಡಗಳಾಗಿ ಬಿಳಿಯಾರು, ಕೊಡಂಕೇರಿ, ಅರಂತೋಡು ಪೇಟೆ, ಅರ್ಲಡ್ಕ ಮೊದಲಾದ ವ್ಯಾಪಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.











