ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸತತ 11 ವರ್ಷದಿಂದ ಶೇ.100 ಸಾಲ ವಸೂಲಾತಿ ಸಾಧನೆಗಾಗಿ ಡಿ.ಸಿ.ಸಿ.ಬ್ಯಾಂಕಿನಿಂದ ಪಾರಿತೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.















ಆ.30 ರಂದು ನಡೆದ ಡಿ.ಸಿ.ಬ್ಯಾಂಕ್ ಮಹಾಸಭೆಯಲ್ಲಿ ಡಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ರವರಿಗೆ ಪಾರಿತೋಷಕ ಪ್ರಸಸ್ತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹೇಶ ಜಬಳೆ,ನಿರ್ದೇಶಕರಾದ ಅನಂತಕುಮಾರ್ ಕೆ,ನಟರಾಜ ಎಸ್,ಸತೀಶ ಎ.ಕೆ,ದಿವ್ಯಾ ಎಂ.ಆರ್.ಭವಾನಿ ಎಂ.ಸಿ,ಮಧುಕರ ಎನ್,ರವಿನಾಥ ಎಂ.ಎಸ್,ಚಂದ್ರಶೇಖರ ಎಸ್,ಪುರಂದರ ಎಸ್,ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಸಿ.ಎಚ್,ರಾಜೇಂದ್ರ ಪಿ.ವೈ ,ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










