ನಳಿಯಾರು ಭಾಸ್ಕರ ಗೌಡ ನಿಧನ

0

ಮುರುಳ್ಯ ಮನೆತನದ ಹಿರಿಯರಾದ ದಿ. ಲಿಂಗಪ್ಪ ಗೌಡರ ಪುತ್ರ ನಳಿಯಾರು ಭಾಸ್ಕರ ಗೌಡರು ವಯೋಸಹಜವಾಗಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಅವರು ಧಾರ್ಮಿಕ ಕ್ಷೇತ್ರ, ಸಾಮಾಜಿಕವಾಗಿ ಕೊಡುಗೈದಾನಿಯಾಗಿ ಸಂಘದ ಮೂಲಕ ಹಲವು ಕ್ಷೇತ್ರಗಳಿಗೆ ಧನ ಸಹಾಯ ನೀಡಿದ್ದು, ಮುರುಳ್ಯ ದೇವರಕಾನ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದ ಟ್ರಸ್ಟ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಮುರುಳ್ಯ ಹಾಗೂ ಸೊಸೆ, ಪುತ್ರಿ, ಅಳಿಯ, ಅಪಾರ ಅಭಿಮಾನಿಗಳು ಬಂಧು ಮಿತ್ರರನ್ನು, ಕುಟುಂಬಸ್ಥರನ್ನು, ಮೊಮ್ಮಕ್ಕಳನ್ನು ಅಗಲಿದ್ದಾರೆ.