ನ.ಪಂ. ಸದಸ್ಯೆ ಹಾಗೂ ಮಠದವರಿಂದ ತೆರವು ಕಾರ್ಯಾಚರಣೆ

ಪಯಸ್ವಿನಿ ನದಿಯ ತಟದ ದೇವರ ಕಟ್ಟೆಗೆ ಹಾಗೂ
ರಾಘವೇಂದ್ರ ಮಠಕ್ಕೆ ಹೋಗುವ ರಸ್ತೆಯಲ್ಲಿ ಭಾರಿ ಗಾತ್ರದ ಮರವೊಂದು ಇಂದು ಮದ್ಯಾಹ್ನ ಬೀಸಿದ ಗಾಳಿ ಮಳೆಗೆ ಬಿದ್ದ ಘಟನೆ ವರದಿಯಾಗಿದೆ.
















ವಿಪರೀತವಾಗಿ ಗಾಳಿ ಬಿಸಿದ್ದರಿಂದ ಮರ ಬಿದ್ದು
ಅಲ್ಲೇ ಪಕ್ಜದಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ.
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ವಿಷಯ ತಿಳಿದ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ
ಶೇಟ್ ಹಾಗೂ ರಾಘವೇಂದ್ರ ಮಠದ ಸಮಿತಿಯವರು ಬಂದು ಮೆಷಿನ್ ಬಳಸಿ ಮರ
ತೆರವು ಕಾರ್ಯಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯರು ಸಹಕರಿಸಿದರು.










