
















ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯಲಿರುವುದು, ಆ ಪ್ರಯುಕ್ತ ಸೆಪ್ಟೆಂಬರ್ 5 ರಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್ ಜಿ ಲೋಕನಾಥ ರೈ ಅವರ ಅಧ್ಯಕ್ಷತೆಯಲ್ಲಿ ಸಭೆ ಕಲಾಪನಡೆಯಿತು. ಅನ್ನದಾನ ಮಾಡುವ ಬಗ್ಗೆ, ಸಾಂಸ್ಕೃತಿಕ, ಪೂಜಾ ವಿಧಿ ವಿಧಾನ ಭಕ್ತರು ಚರ್ಚೆಯಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ಸಿನ ಬಗ್ಗೆ ಸಭೆಯಲ್ಲಿ ಅಧ್ಯಕ್ಷರು ವಿನಂತಿಸಿ ಕೊಂಡರು, ಉತ್ಸವ ಸಮಿತಿ, ಭಜನಾ ಮಂಡಳಿ, ಕಲಾ ಸಂಘ ಸಮಿತಿ , ವಿವಿಧ ಸಂಘಗಳು ನವೋದಯ ಸಂಘ, ಒಡಿಯೂರು ಸಂಘ, ಧರ್ಮಸ್ಥಳ ಸಂಘಗಳ ಪದಾಧಿಕಾರಿಗಳು, ಉಪಸ್ಥಿತರಿದ್ದರು, ವೇದಿಕೆಯಲ್ಲಿ ಸದಸ್ಯರಾದ ಪ್ರಮೋದ್ ಕುಮಾರ್ ರೈ, ವೇಣುಗೋಪಾಲ್ ರೈ, ವಾಚಣ್ಣ ಗೌಡ ಹುಧೇರಿ, ಶ್ರೀಮತಿ ಕಸ್ತೂರಿ ಚಂದ್ರಶೇಖರ ಮೊಂಟಪಾದೇ, ಶ್ರೀಮತಿ ಗೌರಮ್ಮ ವೆಂಕಟರಮಣ ಗೌಡ ನಾವುರು , ಹಾಗೂ ಸಭೆಯಲ್ಲಿ ಪುದೇ ದೇವಸ್ಥಾನದ ಸಮಿತಿ ಕಾರ್ಯದರ್ಶಿ ಹರೀಶ್ ಕುಮಾರ್ ಹುಧೇರಿ, ಪಂಜ ದೇವಸ್ಥಾನದ ಸಮಿತಿ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಹಾಸನ ಸಹಾಯಕ ಜೈಲರ್ ಪುಟ್ಟಣ್ಣ ಆಚಾರ್ಯ, ಶಾಂತಿನಗರ ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ದಿನೇಶ್ ನಾಡುಬೈಲು, ಮುರುಳ್ಯ ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ಅವಿನಾಶ್ ದೇವರ ಮಜಲು, ಕೂಡು ಕಟ್ಟು ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
– A.S.Salyan











