ಸೆ.9 ರಿಂದ ನಾಮಪತ್ರ ಆರಂಭ, ಸೆ.21 ಚುನಾವಣೆ
ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಇದರ ಆಡಳಿತ ಮಂಡಳಿ ಚುನಾವಣೆ ಸೆ.21 ರಂದು ನಡೆಯಲಿರುವುದಾಗಿ ತಿಳಿದು ಬಂದಿದೆ.















ಸೆ. 9 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ.13 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ. ಸೆ.14 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು , ಸೆ.15 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿರುತ್ತದೆ. ಸೆ.15 ರಂದು ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದ್ದು, ಸೆ.21 ರಂದು ಮತದಾನ ನಡೆಯುವುದು. ಅಂದೇ ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ. ಒಟ್ಟು 141 ಮಂದಿ ಅರ್ಹ ಮತದಾರರಿರುವುದಾಗಿ ತಿಳಿದು ಬಂದಿದೆ.










