ಬೆಳ್ಳಾರೆ ಜೇಸಿ ಸಪ್ತಾಹ ‘ಸಪ್ತರ್ಷಿ 2025’ ಉದ್ಘಾಟನೆ ಮತ್ತು ತರಬೇತಿ ಕಾರ್ಯಗಾರ

0

ಯುವ ಸಮುದಾಯದ ಉನ್ನತಿಗೆ ಜೇಸಿ ಸಹಕಾರಿ : ಲೋಕೇಶ್ ಅಕ್ರಿಕಟ್ಟೆ

ಯುವ ಸಮುದಾಯ ಸಾಮಾಜಿಕ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ಜೇಸಿ ಸಹಕಾರಿಯಾಗಿದೆ ಎಂದು ಜೇಸಿಐ ವಲಯ 15ರ ಸ್ಕಾಲರ್ ಶಿಪ್ ಮತ್ತು ವಾಯ್ಸ್ ಆಫ್ ಯೂತ್ ವಿಭಾಗದ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ ಹೇಳಿದರು.

ಅವರು ಜೇಸಿಐ ಬೆಳ್ಳಾರೆಯ ಜೇಸಿ ಸಪ್ತಾಹ ‘ಸಪ್ತರ್ಷಿ 2025’ ಮತ್ತು ದಿ. ಬಿ ಎಸ್ ಸರ್ದಾರ್ ಸ್ಮಾರಣಾರ್ಥ ನಡೆದ ತರಬೇತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಲಯ ತರಬೇತುದಾರ ಬಿ. ವಿ ಸೂರ್ಯನಾರಾಯಣ ಎಸ್ ಎಸ್ ಎಲ್ ಸಿ ಬಳಿಕದ ಶೈಕ್ಷಣಿಕ ಅವಕಾಶಗಳ ಬಗ್ಗೆ ತರಬೇತಿ ನೀಡಿದರು.

ಬೆಳ್ಳಾರೆ ಜೇಸಿಐನ ಪೂರ್ವಾಧ್ಯಕ್ಷ ನಾರಾಯಣ ಭಟ್ ಬಾಳಿಲ ಬಿ ಎಸ್ ಸರ್ದಾರ್ ಬಗ್ಗೆ ಸಂಸ್ಮರಣಾ ಮಾತನಾಡಿದರು.

ಬಾಳಿಲ ವಿದ್ಯಾಬೋಧಿನಿ ವಿದ್ಯಾ ಸಂಸ್ಥೆಗಳ ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್, ವಿದ್ಯಾಬೋಧಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಧಾಕೃಷ್ಣ ರಾವ್ ಯು, ವಿದ್ಯಾಬೋಧಿನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯ ಕುಮಾರ್ ರೈ ಎಸ್, ಚೇತನಾ ಕಿಶನ್ ಮುರುಳ್ಯ, ಬೆಳ್ಳಾರೆ ಜೇಸಿಐನ ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ವಂದಿಸಿದರು.

ವರದಿ : ಉಮೇಶ್ ಮಣಿಕ್ಕಾರ