ಬರೋಬ್ಬರಿ 26.5 ಕೆ. ಜಿ ತೂಕ ತೂಗಿದ ಕುಂಬಳಕಾಯಿ..!

0

ಐಡಿಯಲ್ ಭಾಸ್ಕರ ಗೌಡ ರವರ ತೋಟದಲ್ಲಿ ಕಂಡು ಬಂದ ಅಚ್ಚರಿ…

ಕುಂಬಳಕಾಯಿ ಎಂದರೆ ಎಲ್ಲರಿಗೂ ದೊಡ್ಡ ಗಾತ್ರದಲ್ಲಿರುವುದು ಎಂಬುದು ತಿಳಿದಿರುವ ವಿಚಾರ. ಆದರೆ ಅದರಲ್ಲಿಯೂ ಮತ್ತಷ್ಟು ದೊಡ್ಡದಾದ ಕುಂಬಳಕಾಯಿ ನೀವು ನೋಡಿರುವಿರಾ..?


ಸುಳ್ಯದಲ್ಲಿ ಗ್ಯಾರೇಜ್ ಉದ್ಯಮ ನಡೆಸುತ್ತಿರುವ ಕೃಷಿಕರಾಗಿರುವ ಐಡಿಯಲ್ ಭಾಸ್ಕರ ಗೌಡ ರವರ ತೋಟದಲ್ಲಿರುವ ಬಳ್ಳಿಯಲ್ಲಿ ದೊಡ್ಡ ಗಾತ್ರದ ಕುಂಬಳಕಾಯಿ ಸುಮಾರು 26.500 ಕೆ.ಜಿ ತೂಕ ಕಂಡು ಬಂದು ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ದೊಡ್ಡ ಗಾತ್ರದ ಕುಂಬಳಕಾಯಿಗಳು ಅಂದಾಜು 10 ರಿಂದ 15 ಕೆ.ಜಿ ಯಷ್ಟು ಮಾತ್ರ ಬೆಳೆಯುತ್ತದೆ. ಮೊದಲ ಬಾರಿ ಇಷ್ಟು ದೊಡ್ಡ ಗಾತ್ರದ ಕುಂಬಳಕಾಯಿ ನಮ್ಮ ಬಳ್ಳಿಯಲ್ಲಿ ಬೆಳೆದಿರುವುದುಆಶ್ಚರ್ಯ ಮೂಡಿಸಿದೆ ಎಂದು ಭಾಸ್ಕರ ರವರು ಹೇಳುತ್ತಾರೆ.