ಬೆಳ್ಳಾರೆ : ಅಕ್ರಮ ದನ ಸಾಗಾಟದ ಮತ್ತೋರ್ವ ಆರೋಪಿ ಬಂಧನ

0

ರಿಕ್ಷಾದಿಂದ ಜಿಗಿದು ಓಡಿಹೋದ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು

ಕೊಳಂಬಳದಲ್ಲಿ ಅಕ್ರಮವಾಗಿ ರಿಕ್ಷಾದಲ್ಲಿ ದನ ಸಾಗಾಟ ಮಾಡಿದ ಮತ್ತೋರ್ವ ಆರೋಪಿಯನ್ನು ಬಂದಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಸೆ.09 ರಂದು ರಾತ್ರಿ ಬೆಳ್ಳಾರೆ ಕೊಳಂಬಳದಲ್ಲಿ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ರಿಕ್ಷಾ ಚಾಲಕ ಅಬ್ದುಲ್ ಮಸೂದ್ ನನ್ನು ಪೊಲೀಸರು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಪೊಲೀಸರು ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನ ಹಾಗು ರಿಕ್ಷಾ ಚಾಲಕನನ್ನು ಬಂದಿಸುವ ವೇಳೆ ದನ‌ ಖರೀದಿ ಮಾಡಿದ್ದ ಇಸುಬು ಚೆನ್ನಾವರ ಎಂಬ ಆರೋಪಿ ರಿಕ್ಷಾದಿಂದ ಜಿಗಿದು ಓಡಿ ಹೋಗಿ ಪರಾರಿಯಾಗಿದ್ದ.
ಈತನನ್ನು ಪೊಲೀಸರು ಇಂದು ಬಂದಿಸಿದ್ದು ನ್ಯಾಯಾಲಕ್ಕೆ ಹಾಜರುಪಡಿಸಲಾಯಿತು.ಆತನಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ದನ ಮಾರಾಟ ಮಾಡಿದ ಅಬ್ಬಾಸ್ ಕೊಳಂಬಳಬವರು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.