














ಸವಣೂರಿನಲ್ಲಿ ಪಾದಚಾರಿ ಮಹಿಳೆಯೋರ್ವರಿಗೆ ಸ್ಕೂಟಿ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸೆ.09 ರಂದು ಸಂಜೆ ನಡೆದಿದೆ.
ಸವಣೂರಿನ ಅಟ್ಟೋಳೆ ಎಂಬಲ್ಲಿ ಕೊರಪ್ಪೊಳು ಎಂಬವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸುಶೀಲ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿ (ಕೆ.ಎ.21 ವಿ.9768) ಡಿಕ್ಕಿಹೊಡೆಯಿತು.
ಪರಿಣಾಮ ಕೊರಪ್ಪೊಳು ಎಂಬವರ ಕೈ,ಕಾಲು,ಮುಖಕ್ಕೆ ಗಾಯವಾಗಿದ್ದು ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ಸ್ಕೂಟಿ ಸವಾರೆಯ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










