ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ಮತ್ತು ಸ್ಫರ್ಧೆ ಸಮಾರೋಪ
ವಿದ್ಯಾರ್ಥಿಗಳಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಮಹತ್ವದ ಅರಿವು ಮೂಡಿದರೆ ಅದು ನಿರಂತರವಾಗಿ ಮುಂದೆ ಸಾಗುತ್ತದೆ. ಅವರು ಮುಂದಿನ ತಲೆಮಾರಿನ ಸಾಂಸ್ಕೃತಿ ರಾಯಭಾರಿಗಳು ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.

ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಸೆ. 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘಗಳ ಸಮ್ಮಿಲನ ಮತ್ತು ಸ್ಫರ್ಧೆಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.















“ಕಾಲೇಜಿಲಿ ಅರೆಭಾಷೆ ಸಾಹಿತ್ಯ ಮತ್ತೆ ಸಾಂಸ್ಕೃತಿಕ ಸಂಘಗಳ ನಿರ್ವಹಣೆ ಮತ್ತೆ ಕಾರ್ಯಕ್ರಮಗ” ವಿಷಯದ ಕುರಿತು ನೆಹರೂ ಸ್ಮಾರಕ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ| ಅನುರಾಧ ಕುರುಂಜಿಯವರು ಉಪನ್ಯಾಸ ನೀಡುತ್ತಾ ಅರೆಭಾಷೆಯ ಮೂಲ ಶಬ್ದಗಳ ಸಂಗ್ರಹ ಮತ್ತು ಬಳಕೆ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್ ಅವರು ಭಾಗವಹಿಸಿ ಅರೆಭಾಷೆಯ ಸೊಬಗನ್ನು ವಿವರಿಸಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ನಂದಾ ಅವರು ಉಪಸ್ಥಿತರಿದ್ದು ಬಳಕೆಯಿಂದಲೇ ಭಾಷೆ ಉಳಿಯಲು ಸಾಧ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಕಾಡೆಮಿ ಸದಸ್ಯ ಸಂಚಾಲಕ ಚಂದ್ರಶೇಖರ ಪೇಲಾರು ಸ್ವಾಗತಿಸಿರು. ಸದಸ್ಯೆ ಲತಾಪ್ರಸಾದ್ ಕುದ್ಪಾಜೆ ವಂದಿಸಿದರು. ಶ್ರುತಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಪಿ.ಎಸ್. ಕಾರ್ಯಪ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಐದು ಕಾಲೇಜುಗಳು ಭಾಗವಹಿಸಿದ್ದು, ಸಮಗ್ರ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಎಸ್ಎಸ್‌ಪಿಯುಸಿ ಸುಬ್ರಹ್ಮಣ್ಯ ಹಾಗೂ ದ್ವಿತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಗೆದ್ದು ಟ್ರೋಪಿಯನ್ನು ಪಡೆದರು.
ಸ್ಪರ್ಧಾ ವಿಜೇತರು
- ಅರೆಭಾಷೆ ಹಾಡು ವಿಭಾಗ: ಪ್ರಥಮ – ಮೌಲ್ಯ ಎಂ.ವಿ (ಎನ್ನೆಂಪಿಯು ಅರಂತೋಡು), ದ್ವಿತೀಯ – ಯಶಸ್ವಿ (ಎಸ್ಎಸ್‌ಪಿಯುಸಿ ಸುಬ್ರಹ್ಮಣ್ಯ), ತೃತೀಯ – ಅಮೂಲ್ಯ ಎ.ಕೆ. (ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ)
- ಸ್ಥಳನಾಮೆ ಕುರಿತು ಪ್ರಬಂಧ: ಪ್ರಥಮ – ಶ್ರಾವ್ಯ ಎ.ಎಂ (ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ) , ದ್ವಿತೀಯ – ರೇಷ್ಮಾ (ಎಸ್ಎಸ್‌ಪಿಯುಸಿ ಸುಬ್ರಹ್ಮಣ್ಯ), ತೃತೀಯ – ಆಶಿತಾ ಬಿ.ಡಿ. (ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ)
- ಅರೆಭಾಷೆ ಕಿರು ನಾಟಕ: ಪ್ರಥಮ – ಹವ್ಯಶ್ರೀ ಕೆ.ಎಸ್. ಮತ್ತು ತಂಡ (ಎನ್ಎಂಸಿ ಸುಳ್ಯ), ದ್ವಿತೀಯ – ಅಂಕಿತ್ ಮತ್ತು ತಂಡ (ಎಸ್ಎಸ್‌ಪಿಯುಸಿ ಸುಬ್ರಹ್ಮಣ್ಯ), ತೃತೀಯ – ಲೇಖನ ಮತ್ತು ತಂಡ (ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ)
- ಅರೆಭಾಷೆ ಹಾಡಿಗೆ ನೃತ್ಯ: ಪ್ರಥಮ – ಬ್ರಾಹ್ಮಿ ಮತ್ತು ತಂಡ (ಎಸ್ಎಸ್‌ಪಿಯು ಸುಬ್ರಹ್ಮಣ್ಯ), ದ್ವಿತೀಯ – ಯಕ್ಷಿತಾ ಟಿ.ಎಲ್ ಮತ್ತು ತಂಡ (ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ), ತೃತೀಯ – ಶ್ರೇಯಾ ಎ.ಪಿ. ಮತ್ತು ತಂಡ. (ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ)
- ಅರೆಭಾಷೆ ರೀಲ್ಸ್: ಪ್ರಥಮ – ದಿಗಂತ್ ಮತ್ತು ತಂಡ (ಎಸ್ಎಸ್‌ಪಿಯುಸಿ ಸುಬ್ರಹ್ಮಣ್ಯ), ದ್ವಿತೀಯ – ಯುವರಾಜ್ ಬಿ.ಎಸ್ ಮತ್ತು ತಂಡ (ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ.










