ಕೇರಳದ ಕೊಲೆ ಆರೋಪಿಗಳು ಸಂಪಾಜೆಯಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿ

0

ದೇವರಕೊಲ್ಲಿ ರಸ್ತೆ ಬದಿಯಲ್ಲಿ ಆರೋಪಿಗಳ ಥಾರ್ ವಾಹನ ಪತ್ತೆ, ಆರೋಪಿಗಳು ನಾಪತ್ತೆ

ಸಿನಿಮೀಯ ಮಾದರಿಯಲ್ಲಿ ನಡೆದ ಘಟನೆ

ಕೇರಳ ಪಾಲಕ್ಕಾಡ್ ನಲ್ಲಿ ಕೊಲೆ ಪ್ರಕರಣದ ಆರೋಪಿ ಗಳು ಸಂಪಾಜೆ ಬಳಿ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಸಿನಿಮೀಯ ಮಾದರಿಯಲ್ಲಿ ವಂಚಿಸಿ ತಪ್ಪಿಸಿಕೊಂಡ ಪರಾರಿಯಾದ ಘಟನೆ ಸಂಪಾಜೆಯ ಕಲ್ಲುಗುಂಡಿಯಿಂದ ಇಂದು ಸಂಜೆ ವರದಿಯಾಗಿದೆ.

ಆರೋಪಿಗಳು ತಮ್ಮ ವಾಹನದ ಮೂಲಕ ಮಡಿಕೇರಿ ಕಡೆಯಿಂದ ಸುಳ್ಯಕಡೆಗೆ ಪ್ರಯಾಣಿಸುವ ಮಾಹಿತಿ ತಿಳಿದ ಕೇರಳ ಪೊಲೀಸರು ಅವರನ್ನು ಹಿಡಿಯುವುದಕ್ಕಾಗಿ ಕಲ್ಲುಗುಂಡಿ ಹೊರ ಠಾಣಾ ಬಳಿ ಕಾದು ಕುಳಿತಿದ್ದರು.

ಪೊಲೀಸರು ಇರುವ ವಿಷಯ ತಿಳಿದ ಆರೋಪಿ ಗಳು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿಯಿಂದ ಸಿನಿಮೀಯ ಮಾದರಿಯಲ್ಲಿ ತಪ್ಪಿಸಿಕೊಂಡು ಮಡಿಕೇರಿ ಕಡೆಗೆ ವೇಗವಾಗಿ ಹೋಗಿದ್ದು ಈ ವಿವರ ತಿಳಿದ ಸಾರ್ವಜನಿಕರು ದೇವರಕೊಲ್ಲಿ ಬಳಿ ಸೇತುವೆ ಯಲ್ಲಿ ಸೇರಿದ್ದರು. ಇದನ್ನು ಕೂಡ ಅರಿತ ಆರೋಪಿಗಳು ದೇವರ ಕೊಲ್ಲಿ ಬಳಿ ಕಾರನ್ನು ಬಿಟ್ಟು ಕಾಡಿನ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ.