ಸುಶ್ಮಿತಾರಿಗೆ ನಿವೃತ್ತ ಬಿ.ಎಸ್.ಎಫ್. ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಗೌರವ

0

ಬಿಎಸ್ ಎಫ್ ಗೆ ಆಯ್ಕೆಯಾದ ಅರಂತೋಡಿನ ಬೆದ್ರುಪಣೆ ಸುಶ್ಮಿತಾರಿಗೆ ಕರಾವಳಿ ಕರ್ನಾಟಕದ ನಿವೃತ್ತ ಬಿ.ಎಸ್.ಎಫ್. ಯೋಧರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೆ.17ರಂದು ಸನ್ಮಾನ ನೆರವೇರಿಸಿದರು.

ಮಂಗಳೂರಿನಿಂದ ಅರಂತೋಡಿಗೆ ಬಂದ ತಂಡ ಸುಶ್ಮಿತಾರನ್ನು ಅರಂತೋಡು ಗ್ರಾ.ಪಂ. ಸಭಾಂಗಣದಲ್ಲಿ ‌ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿದೀಪ್‌ಕುಮಾರ್ ಕೆ., ನಿರ್ದೇಶಕ ಬಾಲಕೃಷ್ಣ ಎನ್.ಬಿ., ಸದಸ್ಯರುಗಳಾದ ಜನಾರ್ದನ ನಾಯರ್, ಮಾಧವ ಗೌಡ, ಶ್ರೀಮತಿ ರೇವತಿ, ಸುರೇಶ್ ನಾಯಕ್, ಜಗನ್ನಾಥ ನಾಯ್ಕ್, ಅರಂತೋಡು ಗ್ರಾ.ಪಂ. ಪಿಡಿಒ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಮೊದಲಾದವರಿದ್ದರು.