ಸುಳ್ಯ: ಎನ್ನೆಂಸಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಓಝೋನ್ ದಿನಾಚರಣೆ

0

ಜೀವ ರಕ್ಷಣಾ ಪದರ ಕುರಿತು ಉಪನ್ಯಾಸ ಮತ್ತು ಭಾಷಣ ಸ್ಪರ್ಧೆ

ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯ, ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ಘಟಕಗಳ ವತಿಯಿಂದ ವಿಶ್ವ ಓಝೋನ್ ದಿನ 2025 ಪ್ರಯುಕ್ತ ಜೀವ ರಕ್ಷಣಾ ಪದರ ಓಝೋನ್ ಕುರಿತು ಉಪನ್ಯಾಸ ಮತ್ತು ಭಾಷಣ ಸ್ಪರ್ಧೆ ಸೆ. 16ರಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.

ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ರಕ್ಷಿತ್ ಪೆರುವಾಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭೂಮಿಯ ರಕ್ಷಣಾ ಪದರ ಓಜೋನ್ ಮಹತ್ವವನ್ನು ತಿಳಿಸಿ ತಿಳಿಸಿದರು.

ನೆಹರೂ ಮೆಮೋರಿಯಲ್ ಪದವಿ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಭವ್ಯ ಪಿ.ಎಂ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಾಂಶನೆಗೈದರು. ವೇದಿಕೆಯಲ್ಲಿ ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿದ್ದ ಎನ್.ಎಂ.ಪಿ.ಯು.ಸಿ ರಸಾಯನಶಾಸ್ತ್ರ ಉಪನ್ಯಾಸಕಿ ಅಶ್ವಿತಾ, ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಉಪಸ್ಥಿತರಿದ್ದರು.

ಅಂತಿಮ ಜೀವವಿಜ್ಞಾನ ಪದವಿ ವಿದ್ಯಾರ್ಥಿನಿ ನೇಚರ್ ಕ್ಲಬ್ ಕಾರ್ಯದರ್ಶಿ ಕು. ಅಕ್ಷತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕ್ಲಬ್ ನ ಖಜಾಂಚಿ ಚೈತ್ರ ಕೆ ಟಿ, ಸ್ಪರ್ಧಾ ಸಮಿತಿ ಸಂಚಾಲಕಿ ಕೀರ್ತಿಕಾ ಎಂ.ಕೆ ಮತ್ತು ಇತರ ಪದಾಧಿಕಾರಿಗಳು ಕಾರ್ಯಕ್ರಮ ಸಂಘಟಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಓಝೋನ್ ದಿನ ಪ್ರಯುಕ್ತ ಜೀವ ರಕ್ಷಣಾ ಪದರ ಕುರಿತು ವಿದ್ಯಾರ್ಥಿಗಳಿಗೆ ಕಿರು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಉಪನ್ಯಾಸಕರಾದ ಕೃತಿಕಾ ಕೆ ಜೆ, ಪಲ್ಲವಿ ಕೆ.ಎಸ್, ಹರ್ಷಿತಾ ಕೆ, ಜಿತೇಶ್ ಜಿ.ಎಚ್, ಅಭಿಜ್ಞಾ ಎ, ಭಾವನಾ ಕೆ.ಎನ್ ಉಪಸ್ಥಿತರಿದ್ದು, ನೇಚರ್ ಕ್ಲಬ್ ಸದಸ್ಯರು ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.