ಪೆರಾಜೆ ಕಲ್ಚರ್ಪೆ ಘನ ತ್ಯಾಜ್ಯ ಘಟಕದಲ್ಲಿ ತುಂಬಿ ತುಳುಕುತ್ತಿದೆ ಕಸದ ರಾಶಿ

0

ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ಅಗ್ರಹ

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಾಜೆ ಕಲ್ಚೆರ್ಪೆಯಲ್ಲಿ ಅಸಮರ್ಪಕವಾಗಿ ನಡೆಯುತ್ತಿರುವ ನಗರ ಪಂಚಾಯತಿ ಕಸ ವಿಲೇವಾರಿ ಘಟಕದ ಬಗ್ಗೆ ಅಧಿಕಾರಿಗಳು
ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೖಗೊಳ್ಳುವಂತೆ ಆಲೆಟ್ಟಿ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ರವರು ಆಗ್ರಹಿಸಿದ್ದಾರೆ.

ಶಾಸಕರ ಮತ್ತು ನಗರ ಪಂಚಾಯತ್ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ಕಸವನ್ನು ಶೇಖರಣೆ ಮಾಡದೆ ದಿನದ ಕಸವನ್ನು ಅದೇ ದಿನ ಬರ್ನಿಂಗ್ ಮಾಡಿ ಮುಗಿಸುವುದೆಂದು ನಿರ್ಣಯಿಸಲಾಗಿತ್ತು. ಆದರೆ ಬರ್ನಿಂಗ್ ಮಿಷನ್ ಕೆಟ್ಟು ನಿಂತಿದೆ.ಎರೆಹುಳ ಗೊಬ್ಬರ ತುಟ್ಟಿಯ ಘಟದಲ್ಲಿ ಶೇಖರಣೆ ಮಾಡಿ ಶೆಡ್ ನಲ್ಲಿ ಕಸದ ರಾಶಿ ತುಂಬಿ ತುಳುಕಿದೆ.ಇಂಗು ಗುಂಡಿ ನಿರ್ಮಿಸದೆ ಕೊಳಚೆ ನೀರನ್ನು ಸಾರ್ವಜನಿಕ ರಸ್ತೆಗೆ ಬಿಡುತ್ತಿದ್ದು ಪರಿಸರವೆಲ್ಲಾ ದುರ್ನಾತ ಬೀರುತ್ತಿದೆ.
ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.


ಇಲ್ಲವಾದಲ್ಲಿ ಪರಿಸರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.