ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ದೊಡ್ಡಮನೆ: ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

2025 – 26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ – ಬಾಲಕಿಯರ ಯೋಗಾಸನ ಸ್ಪರ್ಧೆ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ (ರಿ. )ನರಿಮೊಗರು ಇಲ್ಲಿ ಸೆ.1 ರಂದು ಆಯೋಜಿಸಲಾಗಿತ್ತು.
ಸಾಂಪ್ರದಾಯಕ ಯೋಗಾಸನ ವಿಭಾಗದಲ್ಲಿ 17 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸಾನ್ವಿ ದೊಡ್ಡ ಮನೆ ಪಂಜ ಇವರು ದ್ವಿತೀಯ ಸ್ಥಾನ -ಬೆಳ್ಳಿ ಪದಕ ಹಾಗೂ ಆರ್ಟಿಸ್ಟಿಕ್ ಸಿಂಗಲ್ ಪ್ರಥಮ ಸ್ಥಾನ ದೊಂದಿಗೆ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಪೇರ್ ಲ್ಲಿ ದ್ವಿತೀಯ ಸ್ಥಾನ-ಬೆಳ್ಳಿ ಪದಕದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಗುರುಗಳಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯದಲ್ಲಿ ಯೋಗಾಭ್ಯಾಸವನ್ನು ಇವರ ಜೊತೆಗೆ ಮಾಡುತ್ತಿದ್ದಾರೆ. ಕಡಬ ಶ್ರೀ ಮುಕಾಂಬಿಕಾ ಮಾರುತಿ ಆಟೋ ವರ್ಕ್ಸ್ ಮಾಲ್ಹಕರಾದ ನಿತ್ಯಾನಂದ ಸೀತಾಲಕ್ಷ್ಮಿ ದೊಡ್ಡಮನೆ ಇವರ ಪುತ್ರಿ