ಸುಳ್ಯ ಸ್ಪೋರ್ಟ್ & ಆರ್ಟ್ಸ್ ಅಶೋಸಿಯೇಶನ್ ಕ್ಲಬ್ ವತಿಯಿಂದ ಆಯೋಜನೆ
ನಿರ್ವಹಣಾ ಸಮಿತಿ ರಚನೆ:
ಅಧ್ಯಕ್ಷ- ಡಾ. ಲೀಲಾಧರ್, ಸಂಚಾಲಕ- ನಾರಾಯಣ ಕೇಕಡ್ಕ,ಕಾರ್ಯದರ್ಶಿ-
ಸುನಿಲ್ ಕೇರ್ಪಳ, ಖಜಾಂಜಿ- ಅಶೋಕ ಪ್ರಭು
ಸುಳ್ಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಲ್ಪಡುವ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯು ನವೆಂಬರ್ ತಿಂಗಳ 7,8 ಮತ್ತು 9 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು
ಸೆ. 18 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣ ದಲ್ಲಿ ನಡೆಯಿತು.
ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಸೋಸಿಯೇಶನ್ ಕ್ಲಬ್ ನ ನೇತೃತ್ವದಲ್ಲಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಪಂದ್ಯಾ ಕೂಟವು ನಡೆಯಲಿದ್ದು ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.















ಕ್ಲಬ್ ನ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನ. ಪಂ. ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ,ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸೂಡಾ ಅಧ್ಯಕ್ಷ ಕೆ. ಎಂ. ಮುಸ್ತಫಾ, ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್. ಸಂಶುದ್ದೀನ್, ಸ್ಪೋರ್ಟ್ಸ್ ಕ್ಲಬ್ ನಿರ್ದೇಶಕ ಅಶೋಕ ಪ್ರಭು, ರಾಷ್ಟ್ರೀಯ ವೈಟ್ ಲಿಫ್ಟಿಂಗ್ ಚಾಂಪಿಯನ್ ತರಬೇತುದಾರ ರಮೇಶ್ ಎ, ಯುನಿವರ್ಸಿಟಿ ಚಾಂಪಿಯನ್ ರಾಧಾಕೃಷ್ಣ ಗೌಡ ಮಾಣಿಬೆಟ್ಟು, ಸರಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಮೋಹನ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಸಂಚಾಲಕ ನಾರಾಯಣ ಕೇಕಡ್ಕ, ಕಾರ್ಯದರ್ಶಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.
ಸುಳ್ಯದಲ್ಲಿ
ಪ್ರಥಮ ಬಾರಿಗೆ ಭಾರ ಎತ್ತುವ ಸ್ಪರ್ಧೆಯನ್ನು ಆಯೋಜಿಸುವ ಸಲುವಾಗಿ ಈಗಾಗಲೇ ಮೖಸೂರಿನಲ್ಲಿ ನಡೆದ ಚಾಂಪಿಯನ್ ಶಿಪ್ ಪಂದ್ಯಾಟವನ್ನು ವೀಕ್ಷಿಸಿ ಬಂದಿದ್ದೇವೆ. ವೈಟ್ ಲಿಫ್ಟಿಂಗ್ ಫೆಡರೇಷನ್ ಅನುಮತಿ ಪಡೆದು ರಾಜ್ಯ ಮಟ್ಟದಲ್ಲಿ ಮಾತುಕತೆ ನಡೆಸಿ ತುಲನೆ ಮಾಡಲಾಗಿದೆ.ಈಗಾಗಲೇ ಪಂದ್ಯಾಟದ ಕುರಿತು
ಪೂರ್ವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಅಶೋಕ ಪ್ರಭು ರವರು ಪ್ರಾಸ್ತಾವಿಕ ಮಾತಿನೊಂದಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಂದ್ಯಾ ಕೂಟದ ನಿರ್ವಹಣಾ ಸಮಿತಿ ಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ
ಕು. ಭಾಗೀರಥಿ ಮುರುಳ್ಯ,
ಅಧ್ಯಕ್ಷ ಡಾ. ಲೀಲಾಧರ್
ಡಿ. ವಿ, ಸಂಚಾಲಕರಾಗಿ ನಾರಾಯಣ ಕೇಕಡ್ಕ,
ಕಾರ್ಯದರ್ಶಿ ಸುನಿಲ್ ಕೇರ್ಪಳ, ಕೋಶಾಧಿಕಾರಿ ಅಶೋಕ ಪ್ರಭು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವಿವಿಧ ಸಂಘ ಸಂಸ್ಥೆಯ ಪ್ರಮುಖರನ್ನು ಗೌರವ ಸಲಹೆಗಾರರನ್ನಾಗಿ ಸೇರ್ಪಡೆ ಮಾಡಲಾಯಿತು.
ಸಂಚಾಲಕ ನಾರಾಯಣ ಕೇಕಡ್ಕ ಪಂದ್ಯಾ ಕೂಟದ ಪೂರ್ವ ತಯಾರಿಯ ಕುರಿತು ವಿವರ ನೀಡಿದರು.
ನಿರ್ದೇಶಕ ಅಶೋಕ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಕೇರ್ಪಳ ವಂದಿಸಿದರು.
ಬೂಡು ರಾಧಾಕೃಷ್ಣ ರೈ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಭಾಗವಹಿಸಿದರು.










