ಮೈಸೂರು ದಸರಾದಲ್ಲಿ ಮಂಡೆಕೋಲು ಅರಿವು ಕೇಂದ್ರದ ಬಾಲ ಕಲಾವಿದರಿಂದ ಮಹಿಷಮರ್ಧಿನಿ ಯಕ್ಷಗಾನ ಪ್ರದರ್ಶನ

0

ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇಲ್ಲಿಯ ಅರಿವು ಕೇಂದ್ರದ ರಂಜನಿ ಮಕ್ಕಳ ಯಕ್ಷಗಾನ ಕಲಾತಂಡ ಇಲ್ಲಿಯ ಬಾಲ ಕಲಾವಿದರಿಂದ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ ಮೂಡಿಬರಲಿದೆ.

ಸೆ.23ರಂದು ರಾತ್ರಿ 7ರಿಂದ 8.30ರವರೆಗೆ ಮಹಿಷ ಮರ್ಧಿನಿ ಯಕ್ಷಗಾನ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಂಡೆಕೋಲು ಗ್ರಾಮ ಗ್ರಂಥಾಲಯದ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ತಿಳಿಸಿದ್ದಾರೆ.