ಜಾಲ್ಸೂರು ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ಜಾಲ್ಸೂರು ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಸೆ. 24 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಸಂತೋಷ್ ರವರು ಆಗಮಿಸಿ ಸಮಗ್ರ ಮಾಹಿತಿ ನೀಡಿದರು.

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೊಮ್ಮಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವರ್ತಕ, ಪ್ರಗತಿಪರ ಕೃಷಿಕ ಶ್ರೀರಾಮ್ ಭಟ್ ದೇರ್ಕಜೆ ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ರಾಹಕರಾದ ರಾಧಾಕೃಷ್ಣ ಸುಳ್ಯ, ಗಂಗಾಧರ ಶೆಟ್ಟಿ, ಅಬ್ದುಲ್ ಖಾದರ್, ರಾಮಚಂದ್ರ ಕಜೆಗದ್ದೆ, ವಿಜಯ ಪೆರುಂಬಾರು, ಸುದರ್ಶನ ಬುಡ್ಲೆಗುತ್ತು, ಶಾಂತ ಅಡ್ಕಾರು, ಶೋಭಾ ಕಾಳಮ್ಮನೆ , ವಸಂತಿ ಕಾಳಮ್ಮನೆ, ಅಂಗನವಾಡಿ ಕಾರ್ಯಕರ್ತೆ ತುಳಸಿ, ಗೋಪಾಲ ಶೇಟ್, ಪಿಗ್ಮಿ ಸಂಗ್ರಾಹಕ ದೀಕ್ಷಿತ್, ಮನ್ವಿತ್ ಸ್ಟುಡಿಯೋ ಮಾಲಕ ಜನಾರ್ದನ ಕಾಣಿಯೂರು, ನವೋದಯ ಸಂಘದ ಸದಸ್ಯರು, ಭಾಗೀರಥಿ ಕಲ್ಲುಮುರ ಉಪಸ್ಥಿತರಿದ್ದರು.

ಬ್ಯಾಂಕಿನ ಸಿಬ್ಬಂದಿಗಳಾದ ಸುಮಂತ್, ಸುದೇಶ್, ನವೀನ, ಶ್ರೀಮತಿ ಶಶಿಕಲಾ ಸಹಕರಿಸಿದರು.

ಜಾಲ್ಸೂರು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿ, ನವೋದಯ ಪ್ರೇರಕಿ ಸುಗಂಧಿ ವಂದಿಸಿದರು.
ಪಿಗ್ಮಿ ಸಂಗ್ರಹಕ ಶೇಖರ ಕಾಳಮ್ಮನೆ ಕಾರ್ಯಕ್ರಮ ನಿರೂಪಿಸಿದರು.