ನವೀಕರಣಗೊಂಡ ವಿಸ್ತೃತ ವ್ಯಾಪಾರ ಮಳಿಗೆಯ ಉದ್ಘಾಟನೆ
ಮಾರ್ಗದರ್ಶನ ನೀಡಿದ ಹಿರಿಯರಿಗೆ ಹಾಗೂ ಸುಳ್ಯದ ಹಿರಿಯ ಜವುಳಿ ವರ್ತಕರಿಗೆ ಸನ್ಮಾನ
ಸುಳ್ಯದ ಹಳೆಗೇಟಿನ ಅಡ್ಕ ಎಂಬಲ್ಲಿ ವ್ಯವಹರಿಸುತ್ತಿರುವ ಲಯನ್ ರಾಮಚಂದ್ರ ತೊಡಿಕಾನ ರವರ ಮಾಲಕತ್ವದ ಸಿದ್ಧ ಉಡುಪು ತಯಾರಿಕಾ ಸಂಸ್ಥೆ ಡಿ. ಆರ್ ಗಾರ್ಮೆಂಟ್ಸ್ ಇದರ 30 ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಾರ್ವಜನಿಕ ಸೇವೆಗಾಗಿ ರಖಂ ಮತ್ತು ಚಿಲ್ಲರೆಮಾರಾಟದನವೀಕರಣಗೊಂಡ ವಿಸ್ತೃತ ವ್ಯಾಪಾರ ಮಳಿಗೆಯ ಉದ್ಘಾಟನಾ ಸಮಾರಂಭವು ಸೆ. 24 ರಂದು ನಡೆಯಿತು.
ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಆಯುಧ ಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ ಗಾರ್ಮೆಂಟ್ಸ್ ನ ಮಹಿಳಾ ಉದ್ಯೋಗಿಗಳಿಂದ ಭಜನಾ ಕಾರ್ಯಕ್ರಮವು ನಡೆಯಿತು.




ಬಳಿಕ ಸಂಸ್ಥೆಯ 30 ನೇ ವರ್ಷದ ( ಪರ್ಲ್) ಸಂಭ್ರಮಾಚರಣೆಯ ಸಮಾರಂಭವು ಸಂಸ್ಥೆಯ ಮಾಲಕ ಲಯನ್ ರಾಮಚಂದ್ರ ಎಂ. ರವರ ಅಧ್ಯೃಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಬೆಳವಣಿಗೆಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ಯು. ಜಿ. ಕರುಣಾಕರ ಉಳುವಾರು, ಪಿ.ವಿ.ವೆಂಕಟ್ರಮಣ ಭಟ್ ತೊಡಿಕಾನ,ತೊಡಿಕಾನ ಅಬ್ದುಲ್ಲ ಮಾಣಿಲ, ಶ್ರೀಮತಿ ಚಂದ್ರಕಲಾ ನಾರಾಯಣ ಕುತ್ತಮೊಟ್ಟೆ, ಶ್ರೀಮತಿ ಏ. ಬಿ ಸಾವಿತ್ರಿಬಾಲಕೃಷ್ಣಅಮೆಮನೆ ಯವರನ್ನು ರಾಮಚಂದ್ರ ಮತ್ತು ಶ್ರೀಮತಿ ಜಯಲಕ್ಷ್ಮಿ ದಂಪತಿಯವರು ಗೌರವಿಸಿ ಸನ್ಮಾನಿಸಿದರು.





ಮುಖ್ಯ ಅಭ್ಯಾಗತರಾಗಿ
ಎಂ. ಬಿ. ಪೌಂಡೇಶನ್ ನ ಅಧ್ಯಕ್ಷರು, ಜವುಳಿ ಉದ್ಯಮಿ ಲಯನ್ ಎಂ. ಬಿ. ಸದಾಶಿವ ರವರು ಅಭಿನಂದನಾ ಮಾತುಗಳನ್ನಾಡಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ದೀಪ ಪ್ರಜ್ವಲಿಸಿ ವ್ಯಾಪಾರ ಮಳಿಗೆಯನ್ನು ಸಾರ್ವಜನಿಕ ಸೇವೆಗಾಗಿ ಉದ್ಘಾಟಿಸಿ ಶುಭ ಹಾರೈಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಪುತ್ತೂರಿನ ಲಘು ಉದ್ಯೋಗ್ ಭಾರತ್ ಘಟಕದ ಅಧ್ಯಕ್ಷ ,ಯುವ ಉದ್ಯಮಿ ಹರಿರಾಯ ಕಾಮತ್ ರವರು ಸಂಸ್ಥೆಗೆ ಶುಭ ಹಾರೈಸಿದರು.

ಸುಳ್ಯದಲ್ಲಿ ಕಳೆದ 48 ವರ್ಷಗಳಿಂದ ಜವುಳಿ ವರ್ತಕರಾಗಿರುವ ಕಲ್ಯಾಣ್ ಟೆಕ್ಸ್ ಟೈಲ್ಸ್ ಮಾಲಕ ರಾಘವ ಜಿ ಯವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯಲ್ಲಿಉದ್ಯೋಗಿಗಳಾಗಿರುವ 36 ಮಂದಿ ಮಹಿಳೆಯರಿಗೆ
ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಂಸ್ಥೆಯ ಸಿಬ್ಬಂದಿ
ಶ್ರೀಮತಿ ಲತಾ, ರಶ್ಮಿ, ನಿರ್ಮಲ, ತೀರ್ಥಲತಾ, ಜ್ಯೋತಿಯವರುಪ್ರಾರ್ಥನೆ ನೆರವೇರಿಸಿದರು.
ಶ್ರೀಮತಿ ಸಂಧ್ಯಾ ಸುಹಾಸ್ ಸ್ವಾಗತಿಸಿದರು. ಸಂಸ್ಥೆಯ ಮಾಲಕ ರಾಮಚಂದ್ರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸನ್ನ ಎಂ. ಆರ್ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಅಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಮಹಿಳಾ ಸಿಬ್ಬಂದಿಗಳು ಸಹಕರಿಸಿದರು.
ಸುಳ್ಯ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಹಿತೈಷಿ ಬಂಧು ಮಿತ್ರರು ಭಾಗವಹಿಸಿ ದರು.ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.










