
ಹೊಸ ಇಕೋ ಕಾರುಯೊಂದಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ಇಕೋ ಕಾರು ನೇರವಾಗಿ ಸುಳ್ಯ ಅಂಬೆಟಡ್ಕದ ಅಕ್ಷಯ್ ಆರ್ಕೇಡ್‌ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದೆ.















ಕೆರ್ಪಳ ಹೇಮನಾಥ್‌ರವರು ಚಲಾಯಿಸುತ್ತಿದ್ದಇಕೋ ಎನ್ನಲಾಗಿದ್ದು, ಗಾಡಿ ಬಂದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳು ಸಂಪೂರ್ಣ ಹಾನಿಯಾಗಿದೆ.



ಮಧ್ಯಾಹ್ನದ ವೇಳೆ ಊಟದ ಸಮಯವಾದ ಕಾರಣ ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳದಲ್ಲಿ ಹೆಚ್ಚಿನ ಜನರು ಸೇರಿ ಓಮಿನಿಯನ್ನ ಹೊರ ತೆಗೆಯುವಲ್ಲಿ ಸಹಕರಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.











