ಯುವ ಜನಾಂಗದಲ್ಲಿ ಕಲೆ, ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲಾಗಿದೆ.ಆಧುನಿಕ ಜನತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಾಕಾರಗಳತ್ತ ಆಕರ್ಷಿತರಾಗಲು ಹಬ್ಬಾಚರಣೆಗಳು ಪ್ರೇರಣೆಯಾಗುತ್ತದೆ.ಅಲ್ಲದೆ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯೂ ಆಚರಣೆಗಳಿಂದ ದೊರಕುತ್ತದೆ.ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಆನಂದ ನೀಡುವುದು ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿಯಾಗುತ್ತದೆ ಎಂದು ಸುಬ್ರಹ್ಮಣ್ಯದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕಲಾವಿದ.ಕೆ.ಯಜ್ಞೇಶ್ ಆಚಾರ್ ನುಡಿದರು.
ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ದೇವಗದ್ದೆ ಅಂಗನವಾಡಿ ಕೇಂದ್ರದಲ್ಲಿ ನಡೆದ 24ನೇವರ್ಷದ ಶಾರದೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಸಂಜೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧಾರ್ಮಿಕ ಆಚರಣೆಗಳು ಆಧುನಿಕ ಯುಗದಲ್ಲಿ ಅತ್ಯಗತ್ಯ.ಸೇವೆ ಮತ್ತು ಭಕ್ತಿಯ ಭಾವನೆಗಳು ಉದ್ದೀಪನಗೊಳ್ಳಲು ಆಚರಣೆಗಳು ಅಡಿಗಲ್ಲು ಎಂದರು.















ಸಮಿತಿಯ ಕಾರ್ಯಾಧ್ಯಕ್ಷೆ ಶೀಲಾ ಗಣೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಪ್ರಮುಖರಾದ ಚೇತನಾ ಹರೀಶ್, ಹಿರಿಯರಾದ ಪರಮೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌಮ್ಯಾ ಭರತ್, ಮಾಜಿ ಸದಸ್ಯರಾದ ಮೋನಪ್ಪ ಮಾನಾಡು, ಮಾಧವ.ಡಿ.ದೇವರಗದ್ದೆ, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಅಂಗನವಾಡಿ ಕಾರ್ಯಕರ್ತೆ ಕಮಲಾ, ಸಹಾಯಕಿ ಆಶಾ ಶೇಷಕುಮಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮಾ ಕುಸುಮಾಧರ ವೇದಿಕೆಯಲ್ಲಿದ್ದರು.
ಬಳಿಕ ದೇವರಗದ್ದೆ ಪರಿಸರ ಮತ್ತು ಸುಬ್ರಹ್ಮಣ್ಯ ಪರಿಸರದ ಕಲಾವಿದರಿಂದ, ಅಂಗನವಾಡಿ ಪುಟಾಣಿಗಳಿಂದ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.










