ಪಂಜ : ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇಗುಲದಲ್ಲಿ ನವರಾತ್ರಿ ಮಹೋತ್ಸವ: ಸಂಪನ್ನ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇಗುಲದಲ್ಲಿ ಸೆ.22 ರಿಂದ ಅ. 1ರ ತನಕ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ, ಎ. ಕೆ. ಮೇಘನ್ ಆರ್ನೋಜಿ ಇವರಿಂದ ಕೊಳಲು ವಾದನ ಕಲಾ ಸೇವೆ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು , ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಅ.1 ರಂದು ಆಯುಧ ಪೂಜೆ-ವಾಹನಪೂಜೆ ನಡೆಯಿತು.