














ಕಲ್ಲುಗುಂಡಿಯ ದೊಡ್ಡಡ್ಕ ಬಳಿ ಲಾರಿ – ಕಾರು ಹಾಗೂ ಸ್ಕೂಟಿಯ ನಡುವೆ ಸರಣಿ ಅಪಘಾತ ಇದೀಗ ಸಂಭವಿಸಿದೆ.
ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಹಾಗೂ ಸಂಪಾಜೆ ಕಡೆ ಹೋಗುತ್ತಿದ್ದ ರೈ ಇಂಡಿಯನ್ ಗ್ಯಾಸ್ ಹೊತ್ತೊಯ್ಯುತ್ತಿದ್ದ ಲಾರಿ ನಡುವೆ ದೊಡ್ಡಡ್ಕ ಬಳಿ ತಲುಪಿದಾಗ ಅಪಘಾತವಾಗಿದ್ದು, ಅದೇ ಮಾರ್ಗವಾಗಿ ಲಾರಿಯ ಹಿಂದಿನಿಂದ ಬರುತ್ತಿದ್ದ ಸ್ಕೂಟಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟಿ ಸವಾರ ರಸ್ತೆಗೆ ಬಿದ್ದಿದ್ದು ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.










