
ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿಯವರಿಗೆ 2025ರ ಪ್ರತಿಷ್ಠಿತ ಬಸವಶ್ರೀ ರಾಜ್ಯ ಪ್ರಶಸ್ತಿ ಸೆ.28ರಂದು ಬೆಂಗಳೂರಿನ ಬನಶಂಕರಿಯ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಜ್ಞಾನ ಮಂದಾರ ಶೈಕ್ಷಣಿಕ ಟ್ರಸ್ಟ್ ನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಐ.ಎ.ಎಸ್. ಇವರು ನೆರವೇರಿಸಿದರು.
















ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಸುಬ್ರಮಣ್ಯ ಯಡಪಡಿತ್ತಾಯರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರ್ ಎನ್ ಎಸ್ ಸಮೂಹ ಶಿಕ್ಷಣ ಸಂಸ್ಥೆ ಬೆಂಗಳೂರಿನ ಆಡಳಿತಾಧಿಕಾರಿಗಳಾದ ಡಾ.ಸುಧೀರ್ ಪೈ, ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೀಕ್ಷಿತ್, ರವೀಶ್ ಕನ್ಸ್ಟ್ರಕ್ಷನ್ ನ ಚಂದ್ರಶೇಖರ್ ಎಂ.ಆರ್. ರವರು ಹಾಗೂ ವಿಧಿಷಿ ಗೀತಾ ಸರಳಾಯರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ನವೀನ್ ರವರ ಕೃಷಿ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇವರು ರಾಜ್ಯ ಕೃಷಿ ಇಲಾಖೆಯ ಸಲಹಾ ಸಮಿತಿ ಸದಸ್ಯರಾಗಿ ಹಾಗೆ ಸಿಹಿ ನೀರಿನ ಮುತ್ತು ಕೃಷಿಕರಾಗಿ ರಾಜ್ಯಾದ್ಯಂತ ಹೆಸರನ್ನು ಗಳಿಸಿರುವರು.










