ನೆಟ್ಟಾರು: ಉಚಿತ ಭಜನಾ ತರಬೇತಿ ಉದ್ಘಾಟನೆ

0

ನೆಟ್ಟಾರು: ಆಸರೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಇದರ ವತಿಯಿಂದ ಶ್ರೀ ಭ್ರಾಮರಿ ಮಕ್ಕಳ ಉಚಿತ ಭಜನಾ ತರಬೇತಿಯನ್ನು ಭಜನಾ ಗುರು
ಮಹೇಶ್ ಎಣ್ಮೂರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೊಲಂಬಳ ರಕ್ತೇಶ್ವರಿ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ ಕೊಲಂಬಳ ಹಾಗೂ ಹಿರಿಯರಾದ ಶೀನಪ್ಪ ಪೂಜಾರಿ ನೆಟ್ಟಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಆಸರೆ ಸಂಘದ ಅಧ್ಯಕ್ಷ ಚಂದ್ರಶೇಖರ ಚಾವಡಿಬಾಗಿಲು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿದ್ದ ಸಂಘದ ಗೌರವಾಧ್ಯಕ್ಷ ಲೋಕೇಶ್ ಪೂಜಾರಿ ಕೆ.ಎಸ್.ನೆಟ್ಟಾರು, ವಸಂತ ಕುಲಾಲ್ ನೆಟ್ಟಾರು,ಪ್ರಭಾಕರ ನೆಟ್ಟಾರು, ಉಮೇಶ್ ಕೋಡಿಮನೆ, ಬಾಬು ಪೆಲತ್ತಮೂಲೆ ಹಾಗೂ ಭಜನಾ ತರಬೇತುದಾರರಾದ ಸಂಪತ್ ಪರನೀರು ಪುತ್ತೂರು, ಲಕ್ಷ್ಮೀಶ ದಾಸನಮಜಲು ಮಾತನಾಡಿ ಶುಭ ಹಾರೈಸಿದರು.

ಸುಮಾರು 30 ಮಕ್ಕಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಸಂಪತ್ ಕಾರ್ಯಕ್ರಮ ನಿರೂಪಿಸಿ, ಸಂಘದ ಅಧ್ಯಕ್ಷ ಚಂದ್ರಶೇಖರ ಚಾವಡಿ ಬಾಗಿಲು ಸ್ವಾಗತಿಸಿ ವಂದಿಸಿದರು.