ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ, ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರ ಇವರ ಆಶ್ರಯದಲ್ಲಿ 75 ದಿನಗಳ ಕಾಲ ನಡೆಯುವ ಪಂಚ ಸಪ್ತತಿ- 2025ರ ಸ್ವಚ್ಛತಾ ಕಾರ್ಯಕ್ರಮಕ್ಕೆ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಚಾಲನೆ ನೀಡಿದರು.
ನಂತರ ಅಂಗನವಾಡಿ ಕೇಂದ್ರ ಕೊಲ್ಲಮೊಗ್ರ ಇದರ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಮುಂದಿನ ದಿನ ಬೇರೆ ಬೇರೆ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ.















ಈ ಸಂದರ್ಭದಲ್ಲಿ ಮಹಾತ್ಮ ಯುವಕ ಮಂಡಲದ ಗೌರವಾಧ್ಯಕ್ಷ ಚಂದ್ರಶೇಖರ ಕೋನಡ್ಕ ಸೇರಿದಂತೆ ಅಂಗನವಾಡಿಯ ಸಹಾಯಕಿ ಹಾಗೂ ಯುವತಿ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ, ವರದಿ: ಡಿ.ಹೆಚ್










