ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್

0

ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಮತ್ತು ಹೊರನಾಡ ಕನ್ನಡಿಗರ ಸಮ್ಮೇಳನ ಮಂಗಳೂರು ಇದರ ವತಿಯಿಂದ ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣಪ್ಪ ಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾರಸಿ ತೋಟದಲ್ಲಿ “ಭತ್ತ”ದ ಬೇಸಾಯವನ್ನು ಮಾಡುವ ಮೂಲಕ ಕಳೆದ 24 ವರುಷ ಗಳಿಂದ ತಾರಸಿ ಕೃಷಿಯ ಜೊತೆಗೆ ಭತ್ತದ,ವಿವಿಧ ತಳಿಯ ಬೆಳೆಸಿ ಕೃಷಿ ಆಸಕ್ತರು, ಶಾಲಾ ಕಾಲೇಜ್ ಗಳ ಸಾವಿರಾರು ವಿದ್ಯಾರ್ಥಿಗಳಿಗೆ, ಸಾವ೯ಜನಿಕರಿಗೂ ಸಂಘ ಸಂಸ್ಥೆ ಗಳಿಗೂ ಹಾಗೂ ಸಂಶೋಧನಾ ನಿರತ ವಿದೇಶದ ಕೃಷಿ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ಪೂರಕ ಅಧ್ಯಯನ ಸಾಮಾಗ್ರಿಗಳನ್ನು ತನ್ನ ತಾರಸಿ ತೋಟದ ಮೂಲಕ ಉಚಿತವಾಗಿ ಒದಗಿಸಿ ಕೊಟ್ಟಿರುತ್ತಾರೆ, ಸೀಮಿತ ಜಾಗದಲ್ಲಿ ಭತ್ತದ ಬೆಳೆ, ತರಾವರಿ ತರಕಾರಿ,ಅಲಂಕಾರಿಕ ಪುಷ್ಪಗಳು,
ಗಡ್ಡೆ ಗೆಣಸುಗಳು,ಆಯುವೇ೯ದ ಗಿಡಗಳು ಹೀಗೆ ಹತ್ತು ಹಲವು ಗಿಡಗನ್ನು ಬೆಳೆಸಿ ಕೃಷಿ ಸ್ವಾವಲಂಬಿ ಚಟುವಟಿಕೆಗಳಿಗೆ ಒತ್ತು ನೀಡಿರುವುದನ್ನು ಗುರುತಿಸಿ ಈ ಅವರ್ಡ್ ನೀಡಲಾಗಿದೆ.