ಕೌಶಲ್ಯ ತರಬೇತಿ ಮತ್ತು ಸಣ್ಣ ಉದ್ದಿಮೆಗಳಿಗೆ ಸರಕಾರದಿಂದ ಪ್ರೋತ್ಸಾಹ : ಸಚಿವ ಹೆಚ್. ಸಿ. ಮಹದೇವಪ್ಪ
ಮಡಿಕೇರಿಯ ಉದ್ಯಮಿ ಹೆಚ್ ಎಂ ನಂದಕುಮಾರ್ ಮಾಲಕತ್ವದ ಲಾಲಿ ಅಪ್ಪರೆಲ್ಸ್ (ಗಾರ್ಮೆಂಟ್ಸ್) ಉದ್ಯಮ ಅ 12 ರಂದು ಮಡಿಕೇರಿಯ ಚೈನ್ ಗೇಟ್ ಬಳಿ ಉದ್ಘಾಟನೆ ಗೊಂಡಿತು. ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.




ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕರ್ನಾಟಕ ಸರಕಾರ ಎಸ್ ಇ ಪಿ, ಟಿ ಎಸ್ ಪಿ ಅನುದಾನದಲ್ಲಿ ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೌಶಲ್ಯ ತರಬೇತಿ ಮತ್ತು ಸಣ್ಣ ಉದ್ಯಮಗಳಿಗೆ ಸಬ್ಸಿಡಿ ನೀಡುವ ಮೂಲಕ ಸ್ವ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಮಡಿಕೇರಿಯಲ್ಲಿ ಇಂದು ಪ್ರಾರಂಭಗೊಂಡಿರುವ ಈ ಗಾರ್ಮೆಂಟ್ಸ್ ಉದ್ಯಮದಿಂದ ನೂರಾರು ಉದ್ಯೋಗ ಸೃಷ್ಟಿ ಆಗಿದೆ. ಸುಮಾರು 200 ಕುಟುಂಬಗಳಿಗೆ ಜೀವನ ಆಧಾರ ನೀಡುವಂತಾಗಿದೆ. ನಂದಕುಮಾರ್ ರವರ ಕನಸಿನ ಉಧ್ಯಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.





ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಧರ್ಮಜ ಉತ್ತಪ್ಪ, ಭಾಗವಹಿಸಿ ಶುಭಹಾರೈಸಿದರು. ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಕೆ.ಪಿ ಚಂದ್ರಕಲಾ, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ವೀಣಾ ಅಚ್ಚಯ್ಯ, ಮಡಿಕೇರಿ ನಾಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜವಳಿ ಇಲಾಖೆ ದಕ್ಷಿಣ ವಲಯ ಜಂಟಿ ನಿರ್ದೇಶಕ ಯೋಗೇಶ್, ಜವಳಿ ಇಲಾಖೆ ಕೊಡಗು ಜಿಲ್ಲಾ ಸಹಾಯಕ ನಿರ್ದೇಶಕ ಗುರುಸ್ವಾಮಿ, ಶ್ರೀಮತಿ ಶಶಿಕಲಾ ನಂದಕುಮಾರ್, ವಿಶಾಲ್ ನಂದಕುಮಾರ್, ಮಾಲಕರಾದ ಕು. ಲಾಂಚನ ನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ಮತ್ತು ಕಡಬ ತಾಲೂಕಿನ ಪ್ರಮುಖ ಮುಖಂಡರಾದ ರಾಧಾಕೃಷ್ಣ ಬೊಳ್ಳೂರು, ಗೋಕುಲ್ ದಾಸ್ ಸುಳ್ಯ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಎಸ್ ಸಂಶುದ್ದಿನ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಪಿ ಪಿ ವರ್ಗಿಸ್, ಶ್ರೀಮತಿ ಉಷಾ ಅಂಚನ್, ಸುಧೀರ್ ದೇವಾಡಿಗ, ಅನಿಲ್ ರೈ ಬೆಳ್ಳಾರೆ, ಸಚಿನ್ ರಾಜ್ ಶೆಟ್ಟಿ, ಹಮೀದ್ ಬೆಳ್ಳಾರೆ, ರವಿಕುಮಾರ್ ಕಿರೀಭಾಗ, ಶಿವಕುಮಾರ್ ಕಂದಡ್ಕ, ಭಾಗೀಶ್ ಕೆ. ಟಿ, ರಕ್ಷಿತ್ ದೊಡ್ಡಡ್ಕ, ಸತೀಶ್ ಎಂ ಕೆ, ಮಧುಸೂಧನ್ ಬೂಡು, ರವೀಂದ್ರ ರುದ್ರಪಾದ, ಜಗದೀಶ್ ಪಡ್ಪು, ಕಮಲಾಕ್ಷ ಕೊಲ್ಲಮೊಗರು, ಮೊದಲಾದವರು ಉಪಸ್ಥಿತರಿದ್ದರು.










