ಪೈಲಾರು: ಶೌರ್ಯ ಯುವತಿ ಮಂಡಲದ ವಾರ್ಷಿಕ ಮಹಾಸಭೆ

0

ಶೌರ್ಯ ಯುವತಿ ಮಂಡಲ (ರಿ) ಪೈಲಾರು ಇದರ ಮಹಾಸಭೆಯು ಅ.12 ರಂದು ಪೈಲಾರಿನ ಮಿತ್ರವೃಂದ ಕಟ್ಟಡದಲ್ಲಿ ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಯಾಗಿ ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಅಧ್ಯಕ್ಷರಾದ ಪವನ್ ಪಲ್ಲತಡ್ಕ, ಉದ್ಘಾಟಕರಾಗಿ ಶ್ರೀಮತಿ ಭವಾನಿ ಮೋಂಟಡ್ಕ ಉಪಸ್ಥಿತರಿದ್ದರು. 

2025-26ನೇ ಸಾಲಿನ ನೂತನ ಸಮಿತಿ ರಚನೆ- ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಕಿರಣ್ ನಾಯರ್ಕಲ್ಲು ಕಾರ್ಯದರ್ಶಿಯಾಗಿ ಸೌಂದರ್ಯ ಕಡಪಳ, ಖಜಾಂಚಿಯಾಗಿ ಶ್ರೀಮತಿ ಶೃತಿ ಆದರ್ಶ ಪೂಜಾರಿಕೋಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಲೋಕೇಶ್ವರಿ ನಾಯರ್ ಕಲ್ಲು, ಜತೆ ಕಾರ್ಯದರ್ಶಿಯಾಗಿ ಪುನೀತ ದೊಡ್ಡಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಲತಾ ನಾಯರ್ಕಲ್ಲು, ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಜಯಶ್ರೀ ತೇಜಸ್ವಿ ಕಡಪಳ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಶ್ರೀಮತಿ ಕುಸುಮಾವತಿ ಕೋಡ್ತುಗುಳಿ, ಶ್ರೀಮತಿ ಮನೋರಮ ಕಡಪಳ, ಶ್ರೀಮತಿ ಭವಾನಿ ಮೊಂಟಡ್ಕ, ನಿರ್ದೇಶಕರುಗಳಾಗಿ ಶ್ರೀಮತಿ ರಶ್ಮಿ ಉಮ್ಮಡ್ಕ,  ಶ್ರೀಮತಿ ರಾಜೀವಿ ಗೋಳ್ಯಾಡಿ, ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ, ಕುಮಾರಿ ಚರಿಷ್ಮ ಕಳಪಳ, ಶ್ರೀಮತಿ ಶ್ವೇತ ನಾಯರ್ಕಲ್ಲು, ಶ್ರೀಮತಿ ಲಲಿತಾ ಲಕ್ಷ್ಮಿ ಊರುಸಾಗು, ಶ್ರೀಮತಿ ಶ್ರೀಲತಾ ಉರುಂಬಿ, ಶ್ರೀಮತಿ ಸುಮಾ ದಾತಡ್ಕ, ಶ್ರೀಮತಿ ಪ್ರಮುಖ ದೊಡ್ಡಡ್ಕ, ಕುಮಾರಿ ದಿಶಾ ಮಾಡಬಾಕಿಲು, ಶ್ರೀಮತಿ ಲಲಿತಾಂಬಿಕಾ ಮೂಕಮಲೆ ಆಯ್ಕೆಯಾದರು.

 ಕುಮಾರಿ ಯಕ್ಷಿತ ಗುಡ್ಡೆಮನೆ ಪ್ರಾರ್ಥಿಸಿದರು ಶ್ರೀಮತಿ ಶ್ವೇತಾ ನಾಯರ್ಕಲ್ಲು ಸ್ವಾಗತಿಸಿದರು ಶ್ರೀಮತಿ ಪುಷ್ಪಲತಾ ನಾಯರ್ ಕಲ್ಲು ವಾರ್ಷಿಕ ವರದಿ ಮಂಡಿಸಿದರು ಶ್ರೀಮತಿ ರಶ್ಮಿ ರಜನಿಕಾಂತ್ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಜಯಶ್ರೀ ತೇಜಸ್ವಿ ಕಡಪಳ ಧನ್ಯವಾದಗೈದರು.ಸಭೆಯಲ್ಲಿ ಸರ್ವ ಸದಸ್ಯರು ಹಾಜರಿದ್ದರು.