ಅರಂತೋಡು ಪಟೇಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಪಟೇಲ್ ಕುಟುಂಬಸ್ಥರಿಂದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಂ ಶಹೀದ್ ತೆಕ್ಕಿಲ್ ರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಪಟೇಲ್ ಸನ್ಮಾನಿಸಿದರು.















ಪಟೇಲ್ ಚಾರಿಟೇಬಲ್ ಅಧ್ಯಕ್ಷ ಹಾಜಿ ಬದುರುದ್ಧೀನ್ ಪಟೇಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕೋಶಾಧಿಕಾರಿ ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್ ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಪಟೇಲ್ ಕುಟುಂಬಸ್ಥರಾದ ಅಮೀರ್ ಕುಕ್ಕುಂಬಳ, ಪಸೀಲು, ಹನೀಫ್, ಎ.ಇ ಮುಸ್ತಫ, ಅಬೂಬಕ್ಕರ್ ಬಡಕೋಡಿ ಅಝೀಝ್ ಸುಳ್ಯ, ಸಮೀರ್ ಕುಕ್ಕುಂಬಳ, ಹನೀಫ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.










