ಮಂಗಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಿ , ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಆಕ್ರೋಶ
ಕೊಡಗು ಸಂಪಾಜೆ 2025_26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಅ.15 ರಂದು ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ
ಅಧ್ಯಕ್ಷತೆಯಲ್ಲಿ ನಡೆಯಿತು.
ನಾಡಗೀತೆಯನ್ನು ಹಾಡುವ ಮೂಲಕ ಸಭೆಯುು ಆರಂಭಗೊಂಡಿತು. ನೋಡೆಲ್ ಅಧಿಕಾರಿಯಾಗಿ ಮಡಿಕೇರಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬಾಲಕೃಷ್ಣ ರೈ ಅವರು ಉಪಸ್ಥಿತರಿದ್ದರು .
ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಅವರು ಗ್ರಾಮ ಸಭೆಯ ವರದಿ ಮತ್ತು ಜುಮಾ ಖರ್ಚಿನ ಬಗ್ಗೆ ವರದಿ ವಾಚಿಸಿದರು.















ಬಳಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ಕಾಡುಪ್ರಾಣಿಗಳ ಹಾವಳಿ, ಮಂಗಗಳ ಹಾವಳಿ, ಬೆಳೆ ಸಮೀಕ್ಷೆ , ಪೋಡಿ ಸರ್ವೇ, ಚರಂಡಿ ಸಮಸ್ಯೆ, ಮೊದಲಾದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆಗಳು ನಡೆಯಿತು.

ಈ ಸಂದರ್ಭದಲ್ಲಿ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ ಅರೆಕಲ್ಲು, ಕಾರ್ಯದರ್ಶಿ ಸೀತಾರಾಮ, ಸದಸ್ಯರಾದ ಕುಮಾರ್ ಚಿತ್ಕಾರ್, ಸುರೇಶ್ ಪಿ.ಎಲ್, ನವೀನ್‌ಕುಮಾರ್ ಬಿ.ಎಂ, ಜಗದೀಶ್ ಪಿ. ಪಿ , ನಿರ್ಮಲಾ ಭರತ್, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಪರಮಲೆ , ಅನಿತಾ, ಹಿರಿಯರಾದ ಗಣಪತಿ ಬಲ್ಯ ಮನೆ,
ಕಂದಾಯ ಇಲಾಖೆ, ಆರೋಗ್ಯ ಇಲಾಖೆ , ಅರಣ್ಯ ಇಲಾಖೆ , ಪಶುಸಂಗೋಪನೆ ಇಲಾಖೆ , ನೀರಾವರಿ , ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಪಾಜೆ ಪ್ರಾ. ಕೃ. ಪ.ಸ. ಸ. ನಿ. ಸಿಬ್ಬಂದಿ ವರ್ಗ , ಸಂಜೀವಿನಿ ಒಕ್ಕೂಟದ ಕಾರ್ಯಕರ್ತೆಯರು , ವಾಟರ್ ಮೇನ್, ಬಿಲ್ ಕಲೆಕ್ಟರ್, ಹಾಗೂ ಗ್ರಾಂ .ಪಂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.
ಕೊನೆ ಹಂತದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕೊಡಗು ಸಂಪಾಜೆ ಅಭಿವೃದ್ಧಿ ಅಧಿಕಾರಿ ಶೋಭಾ ರಾಣಿ ಸರ್ವರನ್ನು ಸ್ವಾಗತಿಸಿ , ಕುಮಾರ್ ಚಿತ್ಕಾರ್ ವಂದಿಸಿದರು.










