ಕಾರ್ಯದರ್ಶಿಯಾಗಿ ಬಾಲಕೃಷ್ಣ ಭೀಮಗುಳಿ, ಕೋಶಾಧಿಕಾರಿಯಾಗಿ ಪವನ್ ಪೆರುಮುಂಡ ಆಯ್ಕೆ















ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಾರ್ಕಳ ಇದರ ವಾರ್ಷಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ನಗರದ ಸ್ವಾಗತ್ ಹೊಟೇಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಪ್ರೋ ಪದ್ಮನಾಭ ಗೌಡ, ನೂತನ ಅಧ್ಯಕ್ಷರಾಗಿ ವಸಂತಸೇನ ಗೌಡ, ಉಪಾಧ್ಯಕ್ಷರಾಗಿ ಉಮೇಶ್ ಬೆಳ್ಳಿಪ್ಪಾಡಿ, ಕುಮುದಾ, ಪ್ರೀಯಾಂಕ ಕೊಚ್ಚಿ ಮರ್ಕಂಜ, ಕಾರ್ಯದರ್ಶಿಯಾಗಿ ಸುಳ್ಯ ಮೂಲದವರಾಗಿದ್ದು ಕಾರ್ಕಳದಲ್ಲಿ ಕರಾವಳಿ ನಾಡಿಯ ಬಾಲಕೃಷ್ಣ ಭೀಮಗುಳಿ,ಕೋಶಾಧಿಕಾರಿಯಾಗಿ ಸುಳ್ಯ ಮೂಲದ ಪವನ್ ಪೆರುಮುಂಡ, ಜತೆ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ರಾಮಚಂದ್ರ ಬರೆಪ್ಪಾಡಿ ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಅಶ್ವತ್ಥ್ ಎಸ್.ಎಲ್, ಆದರ್ಶ ಆರ್., ಎಂ.ಕೆ. ಡಾ. ಚಂದ್ರಕಾಂತ್, ಪುರುಷೋತ್ತಮ ಗೌಡ ಸಾಣೂರು, ಬಾಲಕೃಷ್ಣ ನೆಕ್ಕಿಲ, ಪುಟ್ಟಣ್ಣ ಗೌಡ, ಗೋಪಾಲಕೃಷ್ಣ, ಹುಕ್ರಪ್ಪ ಗೌಡ, ಬಾಲಕೃಷ್ಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿವ್ಯಕುಮಾರ್, ಪ್ರದೀಪ, ಸುಲೋಚನಾ, ಅನಿತಾ ಗೋಪಾಲಕೃಷ್ಣ, ಯಶೋಧ ಹೆಬ್ರಿ, ಶಿವಣ್ಣ ಗೌಡ, ಪುಷ್ಪಾ ಇವರುಗಳು ಆಯ್ಕೆಗೊಂಡರು.










