ಮಂಗಳೂರು ವಿ.ವಿ. ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನಿವೃತ್ತ ಎಸ್.ಪಿ. ರಾಮದಾಸ್ ಗೌಡ ಆಯ್ಕೆ

0

160 ವರ್ಷಗಳ ಹಿಂದೆ ಸ್ಥಾಪನೆಯಾಗಿ, ವಿವಿಧ ಕ್ಷೇತ್ರಗಳಲ್ಲಿ ಭಾರೀ ಸಾಧನೆ ಮಾಡಿದ ಸಾಧಕರನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ , ಹಿಂದೆ ಅವಿಭಜಿತ ದ.ಕ.ಜಿಲ್ಲೆಯ ಏಕೈಕ ಪ್ರತಿಷ್ಠಿತ ಸರಕಾರಿ ಕಾಲೇಜ್ ಆಗಿದ್ದ ಇಂದಿನ ಮಂಗಳೂರು ವಿ.ವಿ. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ 2025-27 ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಎಸ್.ಪಿ., ಗೌಡ ಸಮಾಜದ ಪ್ರಮುಖರಲ್ಲೊಬ್ಬರಾಗಿರುವ ಪುತ್ತೂರಿನ ರಾಮದಾಸ್ ಗೌಡ ಎಸ್. ರವರು ಆಯ್ಕೆಯಾಗಿದ್ದಾರೆ.
ರಾಮದಾಸ್ ಗೌಡರು ಮಂಗಳೂರು ಒಕ್ಕಲಿಗರ ಸೇವಾ ಸಂಘದ ಸಕ್ರಿಯ ಸದಸ್ಯರಾಗಿದ್ದು, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಉಪಾಧ್ಯಕ್ಷರಾಗಿದ್ದಾರೆ. ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಪುತ್ತೂರಿನಲ್ಲಿ ನೆಲೆಸಿರುವ ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸಿದ್ದರು.