ಕುಂಡಡ್ಕ : ಸಿಡಿಲಿನ ಆಘಾತ

0

ಮೂವರಿಗೆ ಗಾಯ : ಆಸ್ಪತ್ರೆಗೆ ದಾಖಲು

: ಪೆರುವಾಜೆ ಗ್ರಾಮದ ಕುಂಡಡ್ಕ ಸಾರಕರೆ ಬಳಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಸಾರಕರೆ ನಿವಾಸಿ ಭಾರತಿ, ಪುತ್ರಿಯರಾದ ಸುಶ್ಮಿತಾ, ಲತಾಶ್ರೀ ಅವರು ಗಾಯಗೊಂಡವರು. ರಾತ್ರಿ‌ 7.30 ಗಂಟೆ ಹೊತ್ತಿಗೆ ಭಾರೀ ಸಿಡಿಲಿನ‌ ಸದ್ದು ಕೇಳಿ ಬಂದಿದ್ದು ಈ ವೇಳೆ ಮನೆ ಒಳಗಿನ ಅಡುಗೆ ಕೋಣೆಯಲ್ಲಿ ಇದ್ದ ಮೂವರಿಗೆ ಸಿಡಿಲಿನ ಅಘಾತ ಉಂಟಾಗಿದೆ. ತತ್ ಕ್ಷಣ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಬ್ಬರಿಗೆ ಹೆಚ್ಚಿನ ಗಾಯ ಉಂಟಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.