ಗ್ಯಾರೇಜ್ ಉದ್ಯಮಿ ಮಿತ್ತೂರು ನಡುಮನೆ ಪದ್ಮಯ್ಯ ಗೌಡ ನಿಧನ

0

ಅಮರಮುಡ್ನೂರು ಗ್ರಾಮದ ಮಿತ್ತೂರು ನಡುಮನೆ
ದಿ. ಚೆನ್ನಪ್ಪ ಗೌಡರ ಪುತ್ರ ಗ್ಯಾರೇಜ್ ಉದ್ಯಮಿ ಪದ್ಮಯ್ಯ ಗೌಡ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.15 ರಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಗೀತಾ, ಓರ್ವ ಪುತ್ರ ಎಂ. ಬಿ. ಎ. ಪದವೀಧರ ಕಿಶನ್, ಸಹೋದರ ಕೆ. ಎಸ್. ಆರ್. ಟಿ. ಸಿ ಬಸ್ ಚಾಲಕ ಧನಂಜಯ ಮಿತ್ತೂರು ಮತ್ತು ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರು ಕುಕ್ಕುಜಡ್ಕದಲ್ಲಿ ಹೈಸ್ಕೂಲ್ ಮತ್ತು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪಿ. ಯು. ಸಿ, ಕೆ. ವಿ. ಜಿ
ಐ ಟಿ ಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಜಟ್ಟಿಪಳ್ಳದ ಪ್ರವೀಣ್ ಮೋಟಾರ್ ವರ್ಕ್ಸ್ ನಲ್ಲಿ ಒಂದು ವರ್ಷ ಕೆಲಸ ಕಲಿತು ಬಳಿಕ ಬೆಂಗಳೂರಿಗೆ ತೆರಳಿದ್ದರು.ಬೆಂಗಳೂರಿನ ಪೀಣ್ಯ ಎಂಬಲ್ಲಿ ಕಳೆದ 25 ವರ್ಷಗಳಿಂದ ಸ್ವಂತ ಗ್ಯಾರೇಜ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿಗೆ ಕಳೆದ ಎರಡು ತಿಂಗಳ ಹಿಂದೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಜಾಲಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ
ಕರೆ ತಂದು ಅಂತ್ಯ ಸಂಸ್ಕಾರವನ್ನು ಕುಕ್ಕುಜಡ್ಕದ ಮನೆಯಲ್ಲಿ ನಡೆಸಲಾಯಿತು.